ಸೋಮವಾರ, ಫೆಬ್ರವರಿ 24, 2020
19 °C
Maduri Dixith

ನೆಟ್‌ಫ್ಲಿಕ್ಸ್‌ನತ್ತ ನಾಟ್ಯ ಮಯೂರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

90ರ ದಶಕದಲ್ಲಿ ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್‌ ಈಗಲೂ ತೆರೆ ಮೇಲೆ ಬಂದ್ರೆ ಅವರದ್ದೇ ಹವಾ. ಒಂದಷ್ಟು ಕಾಲ ಚಿತ್ರರಂಗದಿಂದ ದೂರವಾಗಿದ್ದ ಅವರು ಬಳಿಕ ‘ಕಲಂಕ್‌’, ‘ಟೋಟಲ್‌ ಧಮಾಲ್‌’, ‘ಬಕೆಟ್‌ ಲಿಸ್ಟ್‌’ ಚಿತ್ರಗಳಲ್ಲಿ ಅಭಿನಯಿಸಿದ್ದರು. ಈ ಚಿತ್ರಗಳಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲದಿದ್ದರೂ, ಮಾಧುರಿ ದೀಕ್ಷಿತ್‌ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. 

ಇದೀಗ ಬೆಳ್ಳಿ ತೆರೆಯಿಂದ ವೆಬ್‌ ಸಿರೀಸ್‌ನತ್ತ ಮಾಧುರಿ ದೀಕ್ಷಿತ್‌ ಮುಖ ಮಾಡಿದ್ದಾರೆ. ಆನ್‌ಲೈನ್‌ ಸ್ಟ್ರೀಮಿಂಗ್‌ನಂತಹ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಹಾಟ್‌ಸ್ಟಾರ್‌ ವಿನೂತನ ಕಥೆಗಳನ್ನು ಹೊತ್ತು ತರುತ್ತಿದೆ. ಮಾಧುರಿ ದೀಕ್ಷಿತ್‌ ಕೂಡ ನೆಟ್‌ಫ್ಲಿಕ್ಸ್‌ನ ವೆಬ್‌ಸೀರಿಸ್‌ವೊಂದರಲ್ಲಿ ಪಾದರ್ಪಣೆ ಮಾಡಲಿದ್ದಾರೆ. ಈ ವೆಬ್‌ಸೀರಿಸ್‌ಗೆ ಕರಣ್‌ ಜೋಹರ್‌ ಬಂಡವಾಳ ಹೂಡಲಿದ್ದಾರೆ.  ಈ ಹಿಂದೆ ಮಾಧುರಿ, ನೆಟ್‌ಫ್ಲಿಕ್ಸ್‌ನ ಮರಾಠಿ ಡ್ರಾಮಾ ‘ಫಿಫ್ಟೀನ್ತ್‌ ಅಗಸ್ಟ್‌’ ಸಿರೀಸ್‌ ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: ಮಾಧುರಿ ದೀಕ್ಷಿತ್ ನೆನಪಿಸಿದ ಶ್ರದ್ಧಾ ಶ್ರೀನಾಥ್

ಈ ಸುದ್ದಿ ಬಗ್ಗೆ ಮಾಧುರಿ ದೀಕ್ಷಿತ್‌ ಹಾಗೂ ಕರಣ್‌ ಜೋಹರ್‌ ಇಬ್ಬರೂ ಟ್ವೀಟ್‌ ಮಾಡಿದ್ದಾರೆ. ಜಾದೂ ಮಾಡಲು ಗ್ರೇಸ್‌ಫುಲ್ ಮತ್ತು ಸುಂದರಿ ಮಾಧುರಿ ದೀಕ್ಷಿತ್‌ ನೆಟ್‌ಫ್ಲಿಕ್ಸ್‌ ಒರಿಜಿನಲ್ಸ್‌ನಲ್ಲಿ ಬರಲಿದ್ದಾರೆ ಎಂದು ಕರಣ್‌ ಜೋಹರ್‌ ಮಾಧುರಿ ಫೋಟೋ ಶೇರ್‌ ಮಾಡುವ ಮೂಲಕ ಟ್ವೀಟ್‌ ಮಾಡಿದ್ದಾರೆ. ಕರಣ್‌ ಜೋಹರ್‌ ಮತ್ತು ಮಾಧುರಿ ‘ಕಲಂಕ್‌’, ‘ಯೇ ಜವಾನಿ ಹೇ ದಿವಾನಿ’, ‘ಬಾಂಬೆ ಟಾಕೀಸ್‌’ ಮತ್ತು ‘ದಿಲ್‌ ತೋ ಪಾಗಲ್ ಹೇ’ ಚಿತ್ರದಲ್ಲಿ ಜೊತೆಗೆ ಕೆಲಸ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು