ಮಂಗಳವಾರ, ಆಗಸ್ಟ್ 9, 2022
23 °C

ಅರ್ಜುನ್‌, ಮಲೈಕಾ ವಯಸ್ಸಿನ ಅಂತರ ಎಷ್ಟಿರಬಹುದು? ಜನ್ಮದಿನ ಮತ್ತೆ ಟ್ರೋಲ್‌ ಆದ ನಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಅರ್ಜುನ್ ಕಪೂರ್ ಇಂದು (ಜೂನ್‌ 26) 37ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರಿಗೆ ಸಿನಿಮಾರಂಗದ ಸೆಲೆಬ್ರಿಟಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ. 

ಕಳೆದ ಹಲವು ವರ್ಷಗಳಿಂದಲೂ ಅರ್ಜುನ್ ಕಪೂರ್ ಅವರ ಲವ್ ಲೈಫ್ ಬಗ್ಗೆ ಚರ್ಚೆಗಳಾಗುತ್ತಲೇ ಇವೆ. ಅವರ ಗೆಳತಿ ನಟಿ ಮಲೈಕಾ ಅರೋರಾ ಮತ್ತು ಅವರ ನಡುವಿನ ವಯಸ್ಸಿನ ಅಂತರವೇ ಇದಕ್ಕೆಲ್ಲ ಕಾರಣ. 37 ವರ್ಷದ ಅರ್ಜುನ್ ಮತ್ತು 48 ವರ್ಷದ ಮಲೈಕಾ ರಿಲೇಷನ್‌ಶಿಪ್‌ನಲ್ಲಿದ್ದಾರೆ.

ಅರ್ಜುನ್‌ ಹುಟ್ಟುಹಬ್ಬದ ಈ ದಿನ ಮಲೈಕಾ ಶುಭಾಶಯಗಳನ್ನು ಕೋರಿ, ನಿನ್ನ ಕನಸುಗಳು ನನಸಾಗಲಿ ಎಂದು ಹೇಳಿದ್ದಾರೆ. ಸದ್ಯ ಇಬ್ಬರು ಪ್ಯಾರಿಸ್‌ ಪ್ರವಾಸದಲ್ಲಿದ್ದಾರೆ. 

ಕಳೆದ ಕೆಲ ವರ್ಷಗಳಿಂದಲೂ ಅರ್ಜುನ್ ಹಾಗೂ ಮಲೈಕಾ ಅವರ ವಯಸ್ಸಿನ ಅಂತರವನ್ನಿಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇಂದು ಕೂಡ ಹಲವರು ಟ್ರೋಲ್‌ ಮಾಡಿದ್ದಾರೆ. 37 ವರ್ಷದ ಅರ್ಜುನ್ ಮತ್ತು 48 ವರ್ಷದ ಮಲೈಕಾ ಡೇಟಿಂಗ್‌ ಮಾಡುತ್ತಿರುವುದು ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. 

ತಮ್ಮ ಬಗ್ಗೆ ಟ್ರೋಲ್ ಮಾಡುವವರಿಗೆ ಅರ್ಜುನ್‌ ಹಾಗೂ ಮಲೈಕಾ ಪದೇ ಪದೇ ಚಾಟಿ ಬೀಸುತ್ತಿದ್ದರು. ವಯಸ್ಸಿನ ಆಧಾರದ ಮೇಲೆ ಸಂಬಂಧವನ್ನು ಸಂದರ್ಭೋಚಿತಗೊಳಿಸುವುದು ಅವಿವೇಕದ ಆಲೋಚನಾ ಪ್ರಕ್ರಿಯೆ ಎಂಬ ಪ್ರಬುದ್ಧತೆಯ ಮಾತುಗಳನ್ನು ಅರ್ಜುನ್‌ ಹೇಳುತ್ತಿದ್ದರು. 

ಮಲೈಕಾ ಅರೋರ, ‘ವಿ’ ಚಾನೆಲ್ ಮೂಲಕ ತಮ್ಮ ವೃತ್ತಿಬದುಕನ್ನು ಆರಂಭಿಸಿದವರು. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಾಲೂರಿದ ಮೇಲೆ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್ ಖಾನ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದರು. ಅವರಿಂದ ವಿಚ್ಛೇದನ ಪಡೆದು ಅರ್ಜುನ್ ಕಪೂರ್ ಜತೆಗೆ 6 ವರ್ಷಗಳಿಂದ ಸಹಜೀವನ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು