ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೇರಿ ಕುಟ್ಟಿ’ಗೆ ಒಲಿದ ಪ್ರಶಸ್ತಿ

Last Updated 7 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಬದುಕಿಗೆ ಹತ್ತಿರವಾಗುವ ಸಿನಿಮಾಗಳನ್ನು ನಿರ್ಮಿಸುವುದರಲ್ಲಿ ಮಲಯಾಳ ಚಿತ್ರರಂಗ ಯಾವಾಗಲೂ ಮುಂದು.

ಮಣ್ಣಿನ ಸೊಗಡು, ಸಾಮಾನ್ಯರ ಜೀವನದಲ್ಲಿ ನಡೆಯುವ ಘಟನೆಗಳ ಎಳೆಯನ್ನಿಟ್ಟುಕೊಂಡು ನಿರ್ಮಿಸುತ್ತಿರುವ ಇಲ್ಲಿನ ಚಿತ್ರಗಳು ಚಿತ್ರಪ್ರೇಮಿಗಳಿಗೆ ಹೆಚ್ಚು ಆಪ್ತವಾಗುತ್ತವೆ. ಲಿಂಗಪರಿವರ್ತನೆ ಮಾಡಿಕೊಂಡು ಮಹಿಳೆಯಾಗಿ ಬದಲಾದ ವ್ಯಕ್ತಿಯ ಕಥೆಯನ್ನು ಹೇಳುವ ‘ಞಾನ್‌ ಮೇರಿಕುಟ್ಟಿ’ (ನಾನು ಮೇರಿಕುಟ್ಟಿ) ಇಂತಹ ಸಿನಿಮಾಗಳಲ್ಲೊಂದು.

ಈ ಚಿತ್ರದಲ್ಲಿ ಮೇರಿಕುಟ್ಟಿಯ ಪಾತ್ರದಲ್ಲಿ ಅಭಿನಯಿಸಿದ್ದ ನಟ ಜಯಸೂರ್ಯ ಅವರು ಈ ಬಾರಿಯ ಅತ್ಯತ್ತಮ ನಟ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರಂಜಿತ್‌ ಶಂಕರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಜಯಸೂರ್ಯ ಅವರು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು.

ಪುರುಷನಾಗಿ ಹುಟ್ಟಿದ್ದರೂ ಹೆಣ್ಣಿನ ಭಾವನೆಗಳನ್ನು ಅದುಮಿಡಲಾಗದೆ ಕೊನೆಗೂ ಹೆಣ್ಣಾಗುವ ತೀರ್ಮಾನಕ್ಕೆ ಬಂದು ಮೇರಿಕುಟ್ಟಿಯಾಗುವ ಚಿತ್ರದ ನಾಯಕ ಅನಂತರ ನಾಯಕಿಯಾಗಿ ಬದಲಾಗುತ್ತಾಳೆ. ಲಿಂಗಪರಿವರ್ತನೆಯ ಕಾರಣಕ್ಕೆ ಮೇರಿಕುಟ್ಟಿ ಅನುಭವಿಸುವ ಯಾತನೆ. ಕುಟುಂಬದವರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗಿ ಬದುಕಿನಲ್ಲಿ ಅನುಭವಿಸುವ ಕಷ್ಟಗಳನ್ನು ಈ ಚಿತ್ರದಲ್ಲಿ ರಂಜಿತ್‌ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಎಷ್ಟೇ ಕಷ್ಟಗಳನ್ನು ಎದುರಿಸಿದರೂ ತನ್ನ ನಿರ್ಧಾರಕ್ಕೆ ಬದ್ಧಳಾಗಿ ಕೊನೆಗೆ ತಾನು ಸಾಧಿಸಬೇಕಾದ ಗುರಿ ತಲುಪುವ ಮೇರಿ ಕುಟ್ಟಿಯ ಕಥೆ ಪ್ರೇರಣಾದಾಯಕವಾಗಿದೆ.

ಲಿಂಗಪರಿವರ್ತನೆಯಾದವರನ್ನು ಸಮಾಜ ಯಾವ ರೀತಿ ನೋಡುತ್ತದೆ ಎಂಬುದನ್ನು. ಮತ್ತು ಅವರು ಎದುರಿಸುವ ಸವಾಲುಗಳನ್ನು ಈ ಚಿತ್ರ ಕಟ್ಟಿಕೊಟ್ಟಿದೆ. ಪುರುಷ ಹಾಗೂ ಮಹಿಳೆ ಹೀಗೆ ಎರಡೂ ವ್ಯಕ್ತಿತ್ವಗಳನ್ನು ಒಳಗೊಂಡು ಅದಕ್ಕೆ ತಕ್ಕಂತಹ ಹಾವ ಭಾವಗಳ ಮೂಲಕ ಜಯಸೂರ್ಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT