ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ನಲ್ಲಿ ಮಲ್ಲಿಕಾ

ಕಾನ್ ಸಿನಿಮೋತ್ಸವದಲ್ಲಿ ಮಲ್ಲಿಕಾ ಶೆರಾವತ್ ಭಾಗಿ
Last Updated 22 ಮೇ 2019, 19:30 IST
ಅಕ್ಷರ ಗಾತ್ರ

ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ 72ನೇ ಕಾನ್ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗವಹಿಸಿರುವ ಫೋಟೊಗಳು ಮಲ್ಲಿಕಾ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ. ಸಂಬಂಧಿಯೊಬ್ಬರ ಮಗುವಿನ ಕೈಹಿಡಿದುಕೊಂಡು ಮೆಟ್ಟಿಲಿಳಿದು ಬರುತ್ತಿರುವ ವಿಡಿಯೊವನ್ನು ಅಪ್‌ಲೋಡ್ ಮಾಡಿರುವ ಮಲ್ಲಿಕಾ, ಬೂದು ಮತ್ತು ಕಪ್ಪು ಬಣ್ಣದ ಉದ್ದನೆಯ ಗೌನಿನಲ್ಲಿ ಮಾದಕವಾಗಿ ನಡೆದುಕೊಂಡು ಬರುವ ದೃಶ್ಯಗಳು ನೆಟ್ಟಿಗರನ್ನು ಸೆಳೆಯುತ್ತಿವೆ.

ಮಲ್ಲಿಕಾಗೆ ಕಾನ್ ಸಿನಿಮೋತ್ಸವದ ರೆಡ್ ಕಾರ್ಪೆಟ್ ಹೊಸದೇನಲ್ಲ. ಈ ಹಿಂದೆಯೂ ಅನೇಕ ಬಾರಿ ಮಲ್ಲಿಕಾ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. 2017ರಲ್ಲಿ ಮಲ್ಲಿಕಾ, ಫ್ಯಾಷನ್ ಡಿಸೈನರ್ ಜಾರ್ಜೆಸ್‌ ಹೊಬೆಕಾ ವಿನ್ಯಾಸ ಮಾಡಿದ್ದ ಗೌನ್ ಧರಿಸಿ ಮಿಂಚಿದ್ದರು. 2018ರಲ್ಲಿ ಮಾನವ ಕಳ್ಳ ಸಾಗಾಣಿಕೆ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ಸಂದೇಶ ಹೊತ್ತು ಮಲ್ಲಿಕಾ ಕಾನ್‌ನಲ್ಲಿ ಭಾಗವಹಿಸಿದ್ದರು.

ಈ ವರ್ಷ ಮಲ್ಲಿಕಾ ‘ಫ್ರೀ ಎ ಗರ್ಲ್ ಇಂಡಿಯಾ’ ಎನ್ನುವ ಎನ್‌ಜಿಒದ ಜೊತೆ ಕೆಲಸ ಮಾಡುತ್ತಿದ್ದಾರೆ. ನಟಿಯರಾದ ಪ್ರಿಯಾಂಕ ಚೋ‌ಪ್ರಾ, ಐಶ್ವರ್ಯಾ ರೈ, ಕಂಗನಾ ರೌನತ್, ಡಯಾನ ಪೆಂಟಿ, ಹುಮಾ ಖುರೇಷಿ, ದೀಪಿಕಾ ಪಡುಕೋಣೆಯಂಥ ಹೈಪ್ರೊಫೈಲ್ ಸೆಲೆಬ್ರಿಟಿಗಳ ನಡುವೆ ಮಲ್ಲಿಕಾ ಕಾಳಜಿ ಮೆಚ್ಚುವಂಥದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT