ಮಂಗಳವಾರ, ಜೂಲೈ 7, 2020
22 °C
ಮಾಜಿ ಪತ್ನಿ ಬಗ್ಗೆ ಮಲಯಾಳ ನಟ ದಿಲೀಪ್

ಮಂಜು ವಾರಿಯರ್‌ ನನ್ನ ವೈರಿ ಅಲ್ಲ: ಮಲಯಾಳಂ ನಟ ದಿಲೀಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ನಟಿ ಮಂಜು ವಾರಿಯರ್‌ ನನ್ನ ವೈರಿ ಅಲ್ಲ. ಸಂದರ್ಭ ಬಂದರೆ ಆಕೆಯೊಂದಿಗೆ ಮತ್ತೆ ತೆರೆ ಹಂಚಿಕೊಳ್ಳಲು ಸಿದ್ಧ’ 

– ತಮ್ಮ ಮಾಜಿ ಪತ್ನಿ ಮಂಜು ವಾರಿಯರ್‌ ಜತೆ ನಟಿಸುವ ಕುರಿತು ಕೇಳಿದ ಪ್ರಶ್ನೆಗೆ ಮಲಯಾಳ ಚಿತ್ರರಂಗದ ಸ್ಟಾರ್‌ ನಟ ದಿಲೀಪ್‌ ನೀಡಿದ ಉತ್ತರವಿದು.

‘ಮಂಜು ಮತ್ತು ನಾನು ಈಗಲೂ ಒಳ್ಳೆಯ ಸ್ನೇಹಿತರು. ಇಬ್ಬರ ನಡುವೆ ಯಾವುದೇ ಮುನಿಸಿಲ್ಲ. ಡೈವೋರ್ಸ್‌ ಪಡೆದ ಮಾತ್ರಕ್ಕೆ ನಾವೇನೂ ವೈರಿಗಳಲ್ಲ. ಈಗಲೂ ಪರಸ್ಪರ ಗೌರವಿಸುತ್ತೇವೆ. ನಮ್ಮ ಸಂಬಂಧ ಚೆನ್ನಾಗಿದೆ’ ಎಂದು ದಿಲೀಪ್‌ ಹೇಳಿದ್ದಾರೆ. 

2015ರಲ್ಲಿ ವಿಚ್ಛೇದನ ಪಡೆಯುವ‌ ಮೂಲಕ 16 ವರ್ಷಗಳ ದಾಂಪತ್ಯಕ್ಕೆ ಇಬ್ಬರೂ ಅಂತ್ಯ ಹಾಡಿದ್ದರು. ಮರುವರ್ಷವೇ ದಿಲೀಪ್‌ ಅವರು ನಟಿ ಕಾವ್ಯ ಮಾಧವನ್‌ ಕೈಹಿಡಿದಿದರು.

ಮಂಜು ವಾರಿಯರ್ ಜತೆಗಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಕಾವ್ಯ ಖಂಡಿತ ಕಾರಣಳಲ್ಲ. ನಮ್ಮಿಬ್ಬರ ನಡುವಿನ ವೈಯಕ್ತಿಕ ಸಮಸ್ಯೆ ಕಾರಣ ಎಂದು ದಿಲೀಪ್‌ ಹೇಳಿದ್ದಾರೆ. ದಿಲೀಪ್ ಮತ್ತು ಮಂಜು ವಾರಿಯರ್ ಜೋಡಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದೆ. ‌  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು