ಸೋಮವಾರ, ಸೆಪ್ಟೆಂಬರ್ 20, 2021
27 °C

'ಮರೆಯದೆ ಕ್ಷಮಿಸುʼ ಹಾಡುಗಳ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮರೆಯದೆ ಕ್ಷಮಿಸು ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ನಡೆದಿದೆ. ʼಕೆಂಡಸಂಪಿಗೆ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದ ಹಾಡಿನ ಸಾಲನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಇಡಲಾಗಿದೆ. 

'ಇದೊಂದು ಪ್ರೇಮಕಥೆ ಆಧಾರಿತ ಚಿತ್ರ. ಈ ಚಿತ್ರದಲ್ಲಿ ನಾಯಕ ಗಾರೆ ಕೆಲಸ ಮಾಡುತ್ತಿರುತ್ತಾನೆ . ಶ್ರೀಮಂತ ಹುಡುಗಿಯನ್ನು ಪ್ರೀತಿಸುತ್ತಾನೆ. ಇವರಿಬ್ಬರ ಪ್ರೀತಿಯಿಂದ ಏನೇನಾಗುತ್ತದೆ? ಎಂಬುದು ಕಥೆಯ ತಿರುಳುʼ ಎಂದರು ನಿರ್ದೇಶಕ ರಾಘವ್‌. ಶಿವರಾಂ ಈ ಚಿತ್ರದ ನಿರ್ಮಾಪಕರು.

ಕೆ.ರಾಘವ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿದ್ದಾರೆ. ರಿಷಿಕೇಶ್ ಈ ಚಿತ್ರದ ಛಾಯಾಗ್ರಹಕರು. ಆರನ್‌ ಕಾರ್ತಿಕ್‌ ವೆಂಕಟೇಶ್‌ ಅವರ ಸಂಗೀತವಿದೆ.

ಪ್ರಮೋದ್ ಬೋಪಣ್ಣ ಚಿತ್ರದ ನಾಯಕ. ಮೇಘನ ಗೌಡ ನಾಯಕಿ. ರಮೇಶ್ ಭಟ್, ಮಿಮಿಕ್ರಿ ಗೋಪಿ, ರಾಕ್ ಲೈನ್ ಸುಧಾಕರ್, ಅಪೂರ್ವ, ಸಿರಿಹುಂಡೆ ರಘು ತಾರಾಬಳಗದಲ್ಲಿದ್ದಾರೆ.

ಶ್ರೀನಗರ ಕಿಟ್ಟಿ ಹಾಡುಗಳ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಡಿಸಿಪಿ ಮಂಜುನಾಥ್ ಪ್ರಸಾದ್, ವೆಂಕಟೇಶ್,  ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು