ಮಂಗಳವಾರ, ಜೂನ್ 22, 2021
22 °C

ಮಗಳ ಮದುವೆ ಸಂಭ್ರಮದಲ್ಲಿ ನಟ ರಮೇಶ್ ಅರವಿಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ರಮೇಶ್ ಹಾಗೂ ಅರ್ಚನಾ ದಂಪತಿಗಳ ‍ಪುತ್ರಿ ನಿಹಾರಿಕಾ ವಿವಾಹ ಅಕ್ಷಯ್ ಅವರೊಂದಿಗೆ ಡಿಸೆಂಬರ್ 28 ರಂದು ನಡೆಯಲಿದೆ.

ನಿಹಾರಿಕಾ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಈಗ ನವಜೀವನಕ್ಕೆ ಅಡಿಯಿಡುತ್ತಿದ್ದಾರೆ.

ಇವರ ವಿವಾಹ ಮಹೋತ್ಸವ ಕಾರ್ಯಕ್ರಮವು ಎರಡು ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ಕೋವಿಡ್–19 ನಿಯಮಾನುಸಾರ ನಡೆಯಲಿದೆ.

ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು, ಅಂದು ಚಿತ್ರರಂಗ‌ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ.

‘ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ‌ ಕರ್ನಾಟಕದ ಜನತೆ, ಚಿತ್ರರಸಿಕರು ಹಾಗೂ ಮಾಧ್ಯಮದವರು ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ.‌ ನಿಮ್ಮ ಪ್ರೀತಿಯ ಆಶೀರ್ವಾದ ಮದುಮಕ್ಕಳ ಮೇಲೆ ಸದಾ ಇರಲಿ’ ಎಂದು ರಮೇಶ್ ಅರವಿಂದ್ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು