ಮಂಗಳವಾರ, ಆಗಸ್ಟ್ 3, 2021
21 °C

ಮದುವೆ ಬಗ್ಗೆ ನಟಿ ರಕುಲ್‌ ಪ್ರೀತ್‌ ಸಿಂಗ್‌ ಹೇಳಿದ್ದೇನು?

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ತೆಲುಗು, ತಮಿಳು ಮತ್ತು ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ರಕುಲ್‌ ಪ್ರೀತ್‌ ಸಿಂಗ್ ಬಹುಬೇಡಿಕೆಯ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಆಕೆ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿಯೂ ಹೌದು. ತನ್ನ ಮಾದಕ ಸೌಂದರ್ಯ ಹಾಗೂ ಪ್ರತಿಭೆಯಿಂದಲೇ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳನ್ನು ಆಕೆ ಸಂಪಾದಿಸಿಕೊಂಡಿದ್ದಾರೆ. ಹಲವು ಸೂಪರ್‌ ಸ್ಟಾರ್‌ಗಳೊಟ್ಟಿಗೆ ತೆರೆ ಹಂಚಿಕೊಂಡಿರುವುದು ಆಕೆಯ ಹೆಗ್ಗಳಿಕೆ.

ರಕುಲ್‌ ಪ್ರೀತ್‌ ಸಿಂಗ್‌ ವಯಸ್ಸು ಮೂವತ್ತು ವರ್ಷ ಸಮೀಪಿಸುತ್ತಿದೆ. ಹಾಗಾಗಿ, ‘ರಕುಲ್‌ ಯಾವಾಗ ಸಪ್ತಪದಿ ತುಳಿಯುತ್ತಾರೆ’ ಎಂಬುದೇ ಆಕೆಯ ಅಭಿಮಾನಿಗಳ ಏಕೈಕ ಪ್ರಶ್ನೆ. ಇತ್ತೀಚೆಗೆ ಆಕೆಯ ಅಮ್ಮ, ‘ಮದುವೆ ಅವಳ ಆಯ್ಕೆ. ಕುಟುಂಬದ ಒತ್ತಡ ಆಕೆಯ ಮೇಲಿಲ್ಲ. ಆಕೆ ಇಷ್ಟಪಡುವ ಹುಡುಗನನ್ನು ಮದುವೆಯಾಗಲು ನಾವು ಸಮ್ಮತಿಸಿದ್ದೇವೆ’ ಎಂದು ಹೇಳಿದ್ದರು. ಮಗಳ ಮದುವೆ ಬಗ್ಗೆ ಅಮ್ಮ ಹೇಳಿದ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಉಂಟು.

ಇತ್ತೀಚಿನ ಸಂದರ್ಶನದಲ್ಲಿ ರಕುಲ್‌ ತನ್ನ ಮದುವೆ ಬಗ್ಗೆ ಮಾತನಾಡಿದ್ದಾರೆ. ಆಕೆ ಮದುವೆ ಬಗ್ಗೆ ಭಯಪಡುವುದಿಲ್ಲವಂತೆ. ‘ನಾನು ಎಂದಿಗೂ ಮದುವೆ ಬಗ್ಗೆ ಆತಂಕಪಡುವುದಿಲ್ಲ. ನನ್ನನ್ನು ತುಂಬಾ ಪ್ರೀತಿಸುವ ಹುಡುಗನನ್ನು ನನ್ನ ಬಾಳಸಂಗಾತಿಯಾಗಿ ಸ್ವೀಕರಿಸುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು