ಬುಧವಾರ, ಡಿಸೆಂಬರ್ 8, 2021
18 °C

‘ಮಾಸ್ಟರ್‌’ ಚಿತ್ರದ ನಟ ಅರುಣ್‌ ಅಲೆಕ್ಸಾಂಡರ್‌ ಹೃದಯಾಘಾತದಿಂದ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳಿನ ‘ಕೊಲಮಾವು ಕೋಕಿಲ’, ‘ಕೈದಿ’ ಹಾಗೂ ‘ಬಿಗಿಲ್‌’ನಂತಹ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಅರುಣ್ ಅಲೆಕ್ಸಾಂಡರ್‌ ನಿನ್ನೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಅವರ ಸಾವು ಇಡೀ ತಮಿಳು ಚಿತ್ರರಂಗಕ್ಕೆ ಶಾಕ್‌ ನೀಡಿದೆ. ಕಾಲಿವುಡ್‌ನ ಖ್ಯಾತ ನಟ–ನಟಿಯರು ಸಂತಾಪ ಸೂಚಿಸಿದ್ದಾರೆ. ಅವರು ವಿಜಯ್‌ ನಟನೆಯ ಇನ್ನಷ್ಟೇ ಬಿಡುಗಡೆಯಾಗಲಿರುವ ‘ಮಾಸ್ಟರ್‌’ ಚಿತ್ರದಲ್ಲೂ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಕಂಠದಾನ ಕಲಾವಿದರೂ ಆಗಿರುವ ಅರುಣ್‌ ಅನೇಕ ಹಾಲಿವುಡ್‌ನ ತಮಿಳು ಅವತರಣಿಕೆಯ ಸಿನಿಮಾಗಳಿಗೆ ದನಿ ನೀಡಿದ್ದಾರೆ. ಲೋಕೇಶ್‌ ಕನಕರಾಜ್‌ ನಿರ್ದೇಶನದ ಕೈದಿಯಲ್ಲಿ ಖಳನಾಯಕ ಪಾತ್ರ ಮಾಡಿದ್ದರು. ಬಿಗಿಲ್‌ನಲ್ಲಿ ಮಿನಿಸ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ನಿರ್ದೇಶಕ ಲೋಕೇಶ್ ಕನಕರಾಜ್‌, ರತ್ನ ಕುಮಾರ್, ಕವಿನ್‌ ಸೇರಿದಂತೆ ಕಾಲಿವುಡ್‌ನ ಖ್ಯಾತನಾಮರು ಈ ನಟ ಸಾವಿಗೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

‘ಅರುಣ್‌ ಸಾವಿನ ಸುದ್ದಿ ಕೇಳಿ ಕಣ್ಣೀರು ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ ಲೋಕೇಶ್‌. ರತ್ನ ಕುಮಾರ್‌ ಹಾಗೂ ಕವಿನ್‌ ‘ಜೀವನ ನಿಜಕ್ಕೂ ಕೆಟ್ಟದ್ದು’ ಎಂದು ಬರೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು