ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.5ಕ್ಕೆ ನೀನಾಸಂ ‘ಮ್ಯಾಟ್ನಿ’ ಶೋ!

Published 22 ಮಾರ್ಚ್ 2024, 0:03 IST
Last Updated 22 ಮಾರ್ಚ್ 2024, 0:03 IST
ಅಕ್ಷರ ಗಾತ್ರ

ನೀನಾಸಂ ಸತೀಶ್‌, ರಚಿತಾ ರಾಮ್‌ ಜೋಡಿಯಾಗಿ ನಟಿಸಿರುವ ‘ಮ್ಯಾಟ್ನಿ’ ಚಿತ್ರ ಬಿಡುಗಡೆಗೆ ಮೂಹೂರ್ತ ಕೂಡಿ ಬಂದಿದೆ. ಮನೋಹರ್ ನಿರ್ದೇಶನದ ಈ ಚಿತ್ರ ಏ.5ರಂದು ತೆರೆಗೆ ಬರುತ್ತಿದೆ.

‘ಕಳೆದ ಡಿಸೆಂಬರ್‌ನಲ್ಲಿಯೇ ಚಿತ್ರ ಬಿಡುಗಡೆಗೆ ತಂಡ ಯೋಚಿಸಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಮಾರ್ಚ್‌ನಲ್ಲಿ ತೆರೆಗೆ ಬರಲು ಸಾಕಷ್ಟು ಚಿತ್ರಗಳಿದ್ದವು. ಹೀಗಾಗಿ ಏಪ್ರಿಲ್‌ ಮೊದಲ ವಾರಕ್ಕೆ ಮುಂದೂಡಿಕೊಂಡೆವು’ ಎನ್ನುತ್ತಾರೆ ನಿರ್ದೇಶಕ ಮನೋಹರ್

‘ಬಾರೋ ಬಾರೋ ಬರುವಾಗ ಬಾಟಲ್ ತಾರೋ’ ಹಾಡಿನ ಮೂಲಕ ‘ಮ್ಯಾಟ್ನಿ’ ತಂಡ ಹೊಸವರ್ಷವನ್ನು ಸ್ವಾಗತಿಸಿತ್ತು. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯ ಈ ಎಣ್ಣೆ ಹಾಡನ್ನು ಪ್ರಕಾಶ್ ಹಾಡಿದ್ದರು.

ನಾಗಭೂಷಣ್, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಚಿತ್ರದ ಪ್ರಚಾರ ಪ್ರಾರಂಭಿಸಿರುವ ನೀನಾಸಂ ಸತೀಶ್‌ ಇತ್ತೀಚೆಗಷ್ಟೇ ತಂಡದೊಂದಿಗೆ ಮಿರ್ಚಿ ಮಂಡಕ್ಕಿ ಜೊತೆ ಚಹಾ ಸೇವಿಸುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT