‘ಮಿಖಾಯೆಲ್‌’ ನಿವಿನ್‌ ಪೌಳಿ

7

‘ಮಿಖಾಯೆಲ್‌’ ನಿವಿನ್‌ ಪೌಳಿ

Published:
Updated:
Prajavani

ಮಾಲಿವುಡ್‌ ನಟ ನಿವಿನ್‌ ಪೌಳಿ ಅವರಿಗೆ ‘ಮಿಖಾಯೆಲ್’ ಸಿನಿಮಾದ ಮೂಲಕ ಹೊಸ ವರ್ಷದ ಶುಭಾರಂಭ ಆಗಲಿದೆ. ಜನವರಿ 18ರಂದು ‘ಮಿಖಾಯೆಲ್’ ಬಿಡುಗಡೆಯಾಗಲಿದೆ.

ಹನೀಫ್‌ ಅಡೇನಿ ನಿರ್ದೇಶನದ ಈ ಚಿತ್ರದಲ್ಲಿ ನಿವಿನ್‌ಗೆ ಜೋಡಿಯಾಗಿ ಮಂಜಿಮಾ ಮೋಹನ್‌ ನಟಿಸಿದ್ದಾರೆ. ಮಾಲಿವುಡ್‌ನ ಹೆಸರಾಂತ ನಟರಾದ ಉನ್ನಿ ಮುಕುಂದನ್‌, ಸುದೇವ್‌ ನಾಯರ್‌, ಬಾಬು ಆ್ಯಂಟನಿ, ಸಿದ್ದಿಕಿ ಚಿತ್ರದಲ್ಲಿದ್ದಾರೆ. ಉನ್ನಿ ಮುಕುಂದನ್ ಖಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೋಸೆಫ್‌ ಆ್ಯಂಟೊ ತಮ್ಮ ಫಿಲ್ಮ್‌ ಕಂಪನಿ ಮೂಲಕ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಮಮ್ಮೂಟ್ಟಿ ನಟನೆಯ ದಿ ಗ್ರೇಟ್‌ ಫಾದರ್‌ ಚಿತ್ರ ನಿರ್ದೇಶಿಸಿದ ಬಳಿಕ ಹನೀಫ್‌ ಅಡೇನಿ ‘ಅಬ್ರಾಹಮಿಂಟೆ ಸಂತತಿಕಳ್‌’ ಚಿತ್ರಕ್ಕೆ ಚಿತ್ರಕತೆ ಬರೆದಿದ್ದರು. ಅದಾದ ಬಳಿಕ ಅವರು ತೊಡಗಿಸಿಕೊಂಡ ಚಿತ್ರ ‘ಮಿಖಾಯೆಲ್’. ವರ್ಷದ ಆರಂಭದಲ್ಲಿ ತೆರೆಕಾಣುವ ‘ಮಿಖಾಯೆಲ್‌’ ಮೂಲಕ ನಿವಿನ್‌ ಪೌಳಿ ಅವರ ಈ ವರ್ಷದ ಅದೃಷ್ಟ ಪರೀಕ್ಷೆಯೂ ನಡೆಯಲಿದೆ.

ನಿವಿನ್‌ ಈಗಾಗಲೇ ‘ಮೂಥನ್‌’ ಚಿತ್ರದ ಚಿತ್ರೀಕರಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದು ಮಲಯಾಳಂ ಮತ್ತು ಹಿಂದಿಯಲ್ಲಿ ಮೂಡಿಬರಲಿದ್ದು, ನಯನತಾರಾ ನಾಯಕಿಯಾಗಿ ಅಭಿನಯಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !