ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ಲವ್‌ ಮಾಕ್ಟೇಲ್‌ ಡಾರ್ಲಿಂಗ್‌, ಮಿಲನಾ ರೆಡಿ

Last Updated 3 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ಲವ್ಮಾಕ್ಟೇಲ್’ ಇತ್ತೀಚೆಗೆ ಗಾಂಧಿನಗರದಲ್ಲಿ ಸಾಕಷ್ಟು ಸದ್ದು ಮಾಡಿದ ಚಿತ್ರ. ಥಿಯೇಟರ್‌ಗೆ ಹೋಗಿ ನೋಡದಿದ್ದ ಚಿತ್ರತಾರೆಯರುಈ ಚಿತ್ರವನ್ನು ಒಟಿಟಿ ಮೂಲಕ ಈಗಿನ ಕ್ವಾರಂಟೈನ್ ಅವಧಿಯಲ್ಲಿ ನೋಡಿದ್ದಾರೆ. ಚಿತ್ರದ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ಈ ಚಿತ್ರವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನಕಂಡ ಮತ್ತು ಸಿನಿ ಪರಿಣತರ ಪ್ರಶಂಸೆ ಗಿಟ್ಟಿಸಿದ್ದಕ್ಕೆ 'ಲವ್ಮಾಕ್ಟೆಲ್ 2' ಮಾಡಲು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಅವರಿಗೆ ಕಿಕ್‌ ಕೊಟ್ಟಿದೆಯಂತೆ. ಇವರ ಕಾಂಬಿನೇಷನ್‌ನಲ್ಲಿ ‘ಲವ್‌ಮಾಕ್ಟೇಲ್‌ 2’ ಸ್ಕ್ರಿಪ್ಟ್‌ ರೆಡಿಯಾಗುತ್ತಿದೆ. ಇದನ್ನು ಸ್ವತಃ ಮಿಲನಾ ನಾಗರಾಜ್ ಅವರೇ 'ಪ್ರಜಾಪ್ಲಸ್'ಗೆ ಖಚಿತಪಡಿಸಿದ್ದಾರೆ.

‘ಸ್ಕ್ರಿಪ್ಟ್ ಏನೋ ರೆಡಿಯಾಗುತ್ತಿದೆ. ಈ ಚಿತ್ರದ ಮುಂದುವರಿದ ಭಾಗವನ್ನು ಯಾವ ರೀತಿ ಮಾಡಬೇಕೆನ್ನುವ ಚರ್ಚೆಯೂ ನಡೆಯುತ್ತಿತ್ತು. ಅಷ್ಟರಲ್ಲಿ ಕೊರೊನಾ‌ ವಕ್ಕರಿಸಿ, ಲಾಕ್ ಡೌನ್ ಆಗಿಬಿಟ್ಟೆವು. ಚಿತ್ರದ ಯಶಸ್ಸೇ ಎರಡನೇ ಭಾಗ ಮಾಡುವ ಪ್ರಯತ್ನಕ್ಕೆ ಕೈಹಾಕಿಸಿತು’ ಎನ್ನುವ ಗುಟ್ಟನ್ನು ಅವರು ಬಿಟ್ಟುಕೊಟ್ಟರು.

ಲವ್‌ಮಾಕ್ಟೇಲ್‌ ಚಿತ್ರವು ಗುಣಮಟ್ಟದಲ್ಲಿಒಂದು ಹಂತಕ್ಕೆ ರೀಚ್ ಆಗಿರುವುದರಿಂದ ಅದಕ್ಕಿಂತಲೂ ಉತ್ಕೃಷ್ಟ ಮಟ್ಟದಲ್ಲಿ‌ ಚಾಪ್ಟರ್‌ 2 ಮಾಡುವುದು ಈಗ ಅವರ ಮುಂದಿರುವ ಸವಾಲಂತೆ.

‘ನಮ್ಮ‌ನಿರೀಕ್ಷೆಗೆ ತಕ್ಕಂತೆ ಸ್ಕ್ರಿಪ್ಟ್ ಸಿದ್ಧವಾದರೆ ಮಾತ್ರ ‘ಲವ್‌ ಮಾಕ್ಟೆಲ್ 2’ ಆದಷ್ಟು ಬೇಗ ಸೆಟ್ಟೇರಲಿದೆ. ಅಂದುಕೊಂಡ ಮಟ್ಟಕ್ಕೆ ಸ್ಕ್ರಿಪ್ಟ್ ಆಗದಿದ್ದರೆ ಚಿತ್ರ ಕೈಬಿಟ್ಟರೂ ಬಿಡಬಹುದು. ಹಾಗಂಥ ಈ ಚಿತ್ರ ಮಾಡಲು ನಿರ್ಮಾಪಕರ‌ ಕೊರತೆ ಇದೆ ಎಂದಲ್ಲ. ನಮ್ಮದೇ ಪ್ರೊಡಕ್ಷನ್‌ನಡಿ ಚಿತ್ರ ನಿರ್ಮಿಸುವ ಸಾಧ್ಯತೆಯೂ ಹೆಚ್ಚಿದೆ’ ಎನ್ನುವ ಮಾತು ಸೇರಿಸಿದರು.

ಎರಡನೇ ಭಾಗದಲ್ಲೂ ನಿಮ್ಮ ನಟನೆ ಇರುತ್ತದೆಯೇ? ಎಂಬ ಪ್ರಶ್ನೆ ಮುಂದಿಟ್ಟರೆ, ‘ಮೊದಲ ಭಾಗದಲ್ಲಿ ನಾನು ಸತ್ತಿದ್ದೇನಲ್ಲ!’ ಎನ್ನುವ ನಗುವಿನ ಉತ್ತರ ಅವರದು. 'ನೋಡಬೇಕು ಪಾತ್ರವಾಗಿ ಇರುತ್ತೇನೋ ಇಲ್ಲವೊ ಗೊತ್ತಿಲ್ಲ. ಪಾತ್ರಗಳು ಫೈನಲ್‌ ಆಗಿಲ್ಲ. ಆದರೆ, ಈ ಚಿತ್ರತಂಡದಲ್ಲಿ ಖಂಡಿತ ನಾನು ಸಹ ಟೀಮ್‌ಮೇಟ್ ಆಗಿರುತ್ತೇನೆ' ಎಂದರು.

ಕ್ವಾರಂಟೈನ್ ಸಮಯಹೇಗೆ ಕಳೆಯುತ್ತಿದ್ದೀರಿ? ಎಂದರೆ, ‘ಹಾಸನದಲ್ಲಿ ತಂದೆ–ತಾಯಿ ಜತೆ ಇದ್ದೇನೆ. ಮನೆಯಲ್ಲೇ ಯೋಗ, ವಾಕಿಂಗ್ ಮಾಡಿ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದೇನೆ. ಒಂದೂವರೆ ವರ್ಷದಿಂದ ಬಿಡುವೇ ಇಲ್ಲ ಎಂದುಕೊಂಡು ಓಡಾಡುತ್ತಿದ್ದೆ. ಈಗ ದಿಢೀರ್ ಸುದೀರ್ಘ ಬಿಡುವು ಸಿಕ್ಕಿದೆ’ ಎಂದು ಮಾತು ವಿಸ್ತರಿಸಿದರು.

ಚಿತ್ರ ಬದುಕಿನ ಬಗ್ಗೆ ಮಾತು ಹೊರಳಿದಾಗ, ನಾನು ಮೊದಲಿನಿಂದಲೂ ಸಿನಿಮಾ, ಪಾತ್ರಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿ. ಈಗಲೂ ಹಾಗೆಯೇ ಇದ್ದೇನೆ. ‘ಬೃಂದಾವನ’, ‘ನಮ್ಮ ದುನಿಯಾ ನಮ್ ಸ್ಟೈಲ್‌’, ‘ಚಾರ್ಲಿ’, ‘ಜಾನಿ’, ‘ಮತ್ತೆ ಉದ್ಭವ’ ಈ ಚಿತ್ರಗಳಲ್ಲಿ ಭಿನ್ನವಾದ ಪಾತ್ರಗಳೇ ಸಿಕ್ಕಿವೆ. ತಮಿಳಿನಲ್ಲಿ‌ ತಂಗರ್‌ ಬಚನ್‌ ಅವರ ನಿರ್ದೇಶನದ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಈ ಚಿತ್ರದಲ್ಲಿ ತಂಗರ್‌ ಬಚನ್‌ ಅವರು ತಮ್ಮ ಪುತ್ರ ವಿಜಿತ್‌ಬಚನ್‌ ಅವರನ್ನು ನಾಯಕನಾಗಿ ಪರಿಚಯಿಸುತ್ತಿದ್ದಾರೆ. ಇದು ಮಾರ್ಚ್‌ನಲ್ಲಿ ತೆರೆಗೆ ಬರಬೇಕಿತ್ತು. ಕೊರೊನಾ ಕಾರಣಕ್ಕೆ ಮುಂದೆ ಹೋಗಿದೆ ಎಂದರು ಮಿಲನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT