ಸೋಮವಾರ, ನವೆಂಬರ್ 30, 2020
20 °C

ಡಾರ್ಲಿಂಗ್‌ ಕೃಷ್ಣ- ಮಿಲನ ನಾಗರಾಜ್‌ ಮದುವೆ ಫೆ. 14ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಮಿಲನ ನಾಗರಾಜ್‌ ಮತ್ತು ನಟ ಡಾರ್ಲಿಂಗ್‌ ಕೃಷ್ಣ ಹಸೆಮಣೆ ಏರುವ ದಿನಾಂಕ ನಿಗದಿಯಾಗಿದೆ. ಲವ್‌ ಮಾಕ್ಟೇಲ್‌ ಚಿತ್ರದ ಬಳಿಕ ಲವ್‌ ಮಾಕ್ಟೇಲ್‌ -2 ಚಿತ್ರದಲ್ಲಿ ಈ ಜೋಡಿ ತೊಡಗಿತ್ತು. ಈ ಚಿತ್ರ ಬಿಡುಗಡೆ ಬಳಿಕ ತಮ್ಮ ಮದುವೆ ಎಂದು ಕೃಷ್ಣ ಅವರು ಈ ಹಿಂದೆ ತಿಳಿಸಿದ್ದರು. 

ಈಗ ಮದುವೆ ದಿನಾಂಕವನ್ನು ಮಿಲನ ನಾಗರಾಜ್‌ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದು ನಿಶ್ಚಿತಾರ್ಥ ಸನ್ನಿವೇಶದ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ಮಿಲನ ಅವರು ೨೦೧೩ರಲ್ಲಿ `ನಮ್ ದುನಿಯಾ ನಮ್ಮ ಸ್ಟೈಲ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ದರ್ಶನ ಅಭಿನಯದ ಬೃಂದಾವನ ಚಿತ್ರದಲ್ಲಿಯೂ ನಟಿಸಿದ್ದರು. ಒಂದು ಮಲೆಯಾಲಂ ಚಿತ್ರದಲ್ಲೂ ನಟಿಸಿದ್ದಾರೆ. ಮೂಲತಃ ಹಾಸನದವರು. 

ಡಾರ್ಲಿಂಗ್ ಕೃಷ್ಣ ಅವರ ಮೂಲ ಹೆಸರು ಸುನೀಲ್ ನಾಗಪ್ಪ. `ಜಾಕಿ', `ಹುಡುಗರು' ಚಿತ್ರದಲ್ಲಿ ದುನಿಯಾ ಸೂರಿ ಜತೆ  ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಸುನೀಲ್ ಅವರದ್ದು. ‘ಮದರಂಗಿ’ ಅವರು ನಾಯಕನಟನಾಗಿ ನಟಿಸಿದ ಮೊದಲ ಚಿತ್ರ. ನಂತರ `ಚಾರ್ಲಿ',`ಜಾಲಿ ಬಾರು ಮತ್ತು ಪೋಲಿ ಹುಡುಗರು',`ಮುಂಬೈ' ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.