ಶುಕ್ರವಾರ, ಅಕ್ಟೋಬರ್ 23, 2020
21 °C

ತೆರೆ ಮೇಲೆ ಜೋಡಿಯಾಗಲಿದ್ದಾರೆ ಪ್ರಥ್ವಿ ಹಾಗೂ ಮಿಲನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವ ನಿರ್ದೇಶಕ ನವೀನ್ ದ್ವಾರಕ್‌ನಾಥ್ ಚೊಚ್ಚಲ‌ ಸಿನಿಮಾದಲ್ಲಿ 2020ರ ಯಶಸ್ವಿ ಚಿತ್ರಗಳು ಎನ್ನಿಸಿಕೊಂಡಿರುವ ದಿಯಾ ಹಾಗೂ ಲವ್‌ ಮಾಕ್ಟೇಲ್‌ನ ನಾಯಕ ಹಾಗೂ ನಾಯಕಿ ಒಂದಾಗಲಿದ್ದಾರೆ.

ಈ ಹಿಂದೆ ನವೀನ್‌ ತಮ್ಮ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ಪ್ರಥ್ವಿ ಅಂಬರ್ ನಟಿಸುತ್ತಿರುವುದಾಗಿ ಹೇಳಿದ್ದರು. ಈಗ ಪ್ರಥ್ವಿಗೆ ಜೋಡಿಯಾಗಿ ಲವ್‌ ಮಾಕ್ಟೇಲ್‌ ನಾಯಕಿ ಮಿಲನಾ ನಾಗರಾಜ್ ನಟಿಸುವುದು ಪಕ್ಕಾ ಆಗಿದೆ.

ಹಾಸ್ಯಮಯ ರೊಮ್ಯಾಂಟಿಕ್‌ ಕತೆ ಹೊಂದಿರುವ ಸಿನಿಮಾಕ್ಕೆ ನವೀನ್‌ ಚಿತ್ರಕತೆ ಬರೆದಿದ್ದಾರೆ. ತಬಲಾ ನಾಣಿ ಕೂಡ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ನವೀನ್‌ ‘ಲವ್‌ ಮಾಕ್ಟೇಲ್ ಸಿನಿಮಾದ ಯಶಸ್ಸು ಮಿಲನಾಗೆ ಹೊಸ ಇಮೇಜ್ ಸೃಷ್ಟಿವಾಗುವಂತೆ ಮಾಡಿದೆ. ಪ್ರಥ್ವಿ ನಮ್ಮ ಸಿನಿಮಾಕ್ಕೆ ಸಹಿ ಹಾಕಿದ ಅವರಿಗೆ ನಾಯಕಿಯಾಗಿ ಬಬ್ಲಿ ಹಾಗೂ ಅಷ್ಟೇ ಪ್ರೌಢತೆಯ ಪಾತ್ರವನ್ನು ನಿಭಾಯಿಸಿ ನಟಿಸುವ ನಟಿಗಾಗಿ ಹುಡುಕಾಟ ನಡೆಸಿದ್ದೆವು. ನಮ್ಮ ಸಿನಿಮಾದ ಪಾತ್ರಕ್ಕೆ ಮಿಲನಾ ಹೆಚ್ಚು ಸೂಕ್ತವಾಗುತ್ತಾರೆ ಎನ್ನಿಸಿತ್ತು. ಆ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿದ್ದೇನೆ’ ಎಂದಿದ್ದಾರೆ.

ಸಿನಿಮಾದ ಶೂಟಿಂಗ್‌ ಏಪ್ರಿಲ್‌–ಮೇನಲ್ಲೇ ನಡೆಯಬೇಕಿತ್ತು. ಆದರೆ ಲಾಕ್‌ಡೌನ್‌ ಕಾರಣದಿಂದ ಶೂಟಿಂಗ್‌ ಅನ್ನು ಮುಂದಕ್ಕೆ ಹಾಕಲಾಯಿತು. ಡಿಸೆಂಬರ್‌ನಲ್ಲಿ ಶೂಟಿಂಗ್‌ ಆರಂಭಿಸುವ ಯೋಜನೆ ಇದೆ. ಈ ಚಿತ್ರಕ್ಕೆ ಹರೀಶ್ ಆರ್‌ಕೆ ಸಂಗೀತ ನಿರ್ದೇಶನವಿದೆ.

ಪ್ರಥ್ವಿ ಅಂಬರ್‌ ಸದ್ಯ ‘ಶುಗರ್‌ಲೆಸ್’ ಹಾಗೂ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.