ಶನಿವಾರ, ಅಕ್ಟೋಬರ್ 19, 2019
22 °C

ಶಾಹಿದ್ ಪತ್ನಿ ಮೀರಾಗೆ ಮತ್ತೆ ಮದ್ವೆಯಾಗುವಾಸೆ!

Published:
Updated:
Prajavani

ಮೀರಾ ರಜಪೂತ್‌ ಹಾಗೂ ಶಾಹಿದ್ ಕಪೂರ್‌, ಬಾಲಿವುಡ್‌ನಲ್ಲಿ ಯಾವಾಗಲೂ ಸುದ್ದಿಯಲ್ಲಿರುವ ಜೋಡಿ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇರಲಿ, ಸಿನಿಮಾ ಬಿಡುಗಡೆ ಇರಲಿ ಈ ಜೋಡಿ ಯಾವಾಗಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತದೆ.

2015ರಲ್ಲಿ ಹಸೆಮಣೆ ಏರಿದ್ದ ಈ ಜೋಡಿ ನವದೆಹಲಿ ಹಾಗೂ ಮುಂಬೈನಲ್ಲಿ ವಿವಾಹ ಆರತಕ್ಷತೆ ಮಾಡಿಕೊಂಡಿತ್ತು. ‘ಮದುವೆಯ ಈ ದಿನಗಳನ್ನು ಮತ್ತೆ ಮೆಲುಕು ಹಾಕುವಂತೆ ಮರುಸೃಷ್ಟಿ ಮಾಡುತ್ತೇನೆ’ ಎಂದು ಶಾಹಿದ್ ಕಪೂರ್‌, ಮೀರಾಗೆ ವಾಗ್ದಾನ ನೀಡಿದ್ದರಂತೆ.

ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಮೀರಾ, ‘ಶಾಹಿದ್ ಮೇಲೆ ನನಗೆ ಭರವಸೆ ಇದೆ. ಅವರು ಹೇಳಿದಂತೆ ಮಾಡೇ ಮಾಡುತ್ತಾರೆ. ಅವರು ನಮ್ಮ ಮದುವೆಯ ಕ್ಷಣಗಳನ್ನು ಮರುಸೃಷ್ಟಿ ಮಾಡಲಿದ್ದಾರೆ. ಆ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

‘ನಮ್ಮ ನಡುವೆ ವಯಸ್ಸಿನ ಅಂತರ ಹೆಚ್ಚಿದೆ. ನಮ್ಮ ನಮ್ಮ ಮನೆಯ ಸಂಪ್ರದಾಯಗಳು ತದ್ವಿರುದ್ಧ. ಆದ್ದರಿಂದ ಮದುವೆಯಲ್ಲಿ ಎರಡೂ ರೀತಿಯ ಸಂಪ್ರದಾಯಗಳನ್ನು ಆಚರಿಸಲಾಯಿತು. ನಮ್ಮ ಕನಸಿನ ಮದುವೆ ಬೇರೆಯೇ ಆಗಿತ್ತು. ಆದ್ದರಿಂದ ಮತ್ತೊಮ್ಮೆ ವಿವಾಹವಾಗುವ ಕನಸಿದೆ’ ಎಂದು ಮೀರಾ ಮುಕ್ತವಾಗಿ ಹೇಳಿಕೊಂಡಿದ್ದಾರೆ.

‘ಕಬೀರ್‌ ಸಿಂಗ್‌’ ಸಿನಿಮಾ ಬಾಲಿವುಡ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದರಿಂದ ಶಾಹಿದ್ ತುಂಬಾ ಬ್ಯುಸಿಯಾದರು. ಈಗ ಅವರು ಬಿಡುವಾಗಿದ್ದಾರೆ. ಅವರಿಂದ ಈಗ ನನಗೆ ಸಾಕಷ್ಟು ನಿರೀಕ್ಷೆಗಳಿವೆ’ ಎಂದು ಮೀರಾ ಹೇಳಿದ್ದಾರೆ.

Post Comments (+)