ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪ್ಸಿ ಪನ್ನು ಕ್ರಿಕೆಟ್‌ಗೆ ಎಂಟ್ರಿ: ‘ಶಹಬ್ಬಾಸ್‌ ಮಿಥು’ ಫಸ್ಟ್‌ಲುಕ್‌ ಬಿಡುಗಡೆ

Last Updated 30 ಜನವರಿ 2020, 1:04 IST
ಅಕ್ಷರ ಗಾತ್ರ

ಮಿಥಾಲಿ ರಾಜ್‌ ಭಾರತ ಕಂಡ ಶ್ರೇಷ್ಠ ಮಹಿಳಾ ಕ್ರಿಕೆಟ್‌ ಆಟಗಾರ್ತಿ. ಭಾರತೀಯ ಮಹಿಳಾ ತಂಡದ ನಾಯಕಿಯಾಗಿಯೂ ಆಕೆಯದು ಅತ್ಯದ್ಭುತ ಸಾಧನೆ. ಇತ್ತೀಚೆಗೆ ಆಕೆಯ ಕ್ರಿಕೆಟ್‌ ಬದುಕಿಗೆ ಭರ್ತಿ ಎರಡು ದಶಕ ತುಂಬಿತು. ಈಗ ಅವರ ಜೀವನ ಕುರಿತ ‘ಶಹಬ್ಬಾಸ್‌ ಮಿಥು’ ಸಿನಿಮಾ ನಿರ್ಮಾಣವಾಗುತ್ತಿದೆ. ಮಿಥಾಲಿ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಬಾಲಿವುಡ್‌ ನಟಿ ತಾಪ್ಸಿ ಪನ್ನು.

ಪ್ರಿಯಾ ಅವೆನ್ ಈ ಕಥೆ ಬರೆದಿದ್ದಾರೆ. ಇದಕ್ಕೆ ರಾಹುಲ್ಪ್‌ ದೊಲಾಕಿಯಾ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಗೊಂಡಿದ್ದು, ಬ್ಯಾಟ್‌ ಬೀಸಿ ಬೌಂಡರಿ ಗೆರೆಯತ್ತ ತದೇಕ ದೃಷ್ಟಿ ನೆಟ್ಟಿರುವ ತಾಪ್ಸಿ ಪನ್ನು ನೋಟ ಬೆರಗು ಹುಟ್ಟಿಸುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ತಾಪ್ಸಿ ಈ ಫೋಟೊ ಹಂಚಿಕೊಂಡಿದ್ದಾರೆ. ‘ನಾನು ಯಾವಾಗಲೂ ನಿಮ್ಮ ಮೆಚ್ಚಿನ ಪುರುಷ ಕ್ರಿಕೆಟಿಗ ಯಾರು ಎಂದು ಪ್ರಶ್ನಿಸುತ್ತೇನೆ. ಈಗ ನೀವು ನಿಮ್ಮ ಮೆಚ್ಚಿನ ಮಹಿಳಾ ಕ್ರಿಕೆಟರ್‌ ಯಾರೆಂದು ಅವರಿಗೆ ಕೇಳಬೇಕು’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಮಿಥಾಲಿ ಮಹಿಳಾ ಕ್ರಿಕೆಟ್‌ನ ಏಕದಿನ ಪಂದ್ಯಗಳಲ್ಲಿ ಆರು ಸಾವಿರ ರನ್‌ಗಳನ್ನು ಗಳಿಸಿರುವ ಏಕೈಕ ಆಟಗಾರ್ತಿಯೂ ಹೌದು. 2005 ಮತ್ತು 2017ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ ಖ್ಯಾತಿ ಅವರದು. ಈ ಸಾಧನೆ ಮಾಡಿದ ಏಕೈಕ ಭಾರತೀಯ ಆಟಗಾರ್ತಿಯೂ ಆಗಿದ್ದಾರೆ. ‘ಶಹಬ್ಬಾಸ್‌ ಮಿಥು’ ಚಿತ್ರ 2021ರ ಫೆಬ್ರುವರಿ 5ರಂದು ಬಿಡುಗಡೆಯಾಗಲಿದೆ.

ತಾಪ್ಸಿ ಪಂಜಾಬಿ ಬೆಡಗಿ. ತೆಲುಗಿನ ‘ಜುಮ್ಮಂಡಿ ನಾದಂ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಆಕೆ ತಮಿಳು, ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ತೆರೆಕಂಡ ‘ಮಿಷನ್‌ ಮಂಗಲ್’ ಚಿತ್ರದಲ್ಲಿನ ಆಕೆಯ ನಟನೆ ಸಿನಿಪ್ರಿಯರ ಮೆಚ್ಚುಗೆಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT