ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಾ ತಿನ್ನುತ್ತೇನೆ, ನಿಯಂತ್ರಿಸಬೇಕಿದೆ: ಆಸ್ಪತ್ರೆಯಿಂದ ಬಂದ ಮಿಥುನ್ ಚಕ್ರವರ್ತಿ

ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರು ಸೋಮವಾರ ಸಂಜೆ ಬಿಡುಗಡೆಯಾದರು.
Published 13 ಫೆಬ್ರುವರಿ 2024, 14:22 IST
Last Updated 13 ಫೆಬ್ರುವರಿ 2024, 14:22 IST
ಅಕ್ಷರ ಗಾತ್ರ

ಕೋಲ್ಕತ್ತ: ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರು ಸೋಮವಾರ ಸಂಜೆ ಬಿಡುಗಡೆಯಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ನಾನು ತುಂಬಾ ತಿನ್ನುತ್ತೇನೆ, ಇದನ್ನು ನಿಯಂತ್ರಣ ಮಾಡಬೇಕಿದೆ. ಆಹಾರ ಕ್ರಮ ಬದಲಾಯಿಸಬೇಕಿದೆ. ನೋಡೋಣ, ಏನಾಗುತ್ತದೆ’ ಎಂದು ಹೇಳಿದ್ದಾರೆ.

ನಾನು ಈಗ ಸಂಪೂರ್ಣ ಗುಣಮುಖನಾಗಿದ್ದೇನೆ. ಚಿತ್ರಗಳ ಶೂಟಿಂಗ್‌ನಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ.

ಎದೆನೋವು ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ 73 ವರ್ಷದ ಈ ನಟ ಫೆಬ್ರುವರಿ 10 ರಂದು ಕೋಲ್ಕತ್ತದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಎಂಆರ್‌ಐ ಸೇರಿದಂತೆ ಹಲವು ತಪಾಸಣೆಗಳಿಗೆ ಒಳಗಾಗಿದ್ದರು.

‘ನಾನು ಆಸ್ಪತ್ರೆಯಲ್ಲಿದ್ದಾಗ ಪ್ರಧಾನಿ ಮೋದಿ ಅವರು ಕರೆ ಮಾಡಿ ವಿಚಾರಿಸಿದರು’ ಎಂದು ಮಿಥುನ್ ತಿಳಿಸಿದರು.

ಮಿಥುನ್ ಅವರು ಹಿಂದಿ, ಬಂಗಾಳಿ, ಒಡಿಯಾ, ತಮಿಳು ಭಾಷೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT