ಶೇನ್ ಶೈನಿಂಗ್

ಬುಧವಾರ, ಜೂನ್ 26, 2019
22 °C

ಶೇನ್ ಶೈನಿಂಗ್

Published:
Updated:
Prajavani

ಶೇನ್‌ ನಿಗಮ್ –ಈ ಹೆಸರು ಕೇಳಿದರೆ ಗಾಯಕ ಸೋನು ನಿಗಮ್ ಅವರ ಸಂಬಂಧಿ ಇರಬಹುದು ಎಂದು ನೀವು ಅಂದುಕೊಂಡರೆ ತಪ್ಪು. ಈತ ಮಲಯಾಳ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಯುವನಟ. ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರೂ ಶೇನ್ ಈಗ ಕೇರಳದಲ್ಲಿ ಮನೆ ಮಾತಾಗಿದ್ದಾರೆ.

ಇದಕ್ಕೆ ಕಾರಣ ಅವರು ನಟಿಸಿರುವ ಚಿತ್ರಗಳು ಭರ್ಜರಿ ಯಶಸ್ಸು ಕಾಣುತ್ತಿರುವುದು. ಹಾಸ್ಯ ಕಲಾವಿದ ಹಾಗೂ ನಟರಾಗಿದ್ದ ಕಲಾಭವನ್ ಅಭಿ ಅವರ ಪುತ್ರ ಈ ಶೇನ್. ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಪ್ರಸ್ತುತ ಅವರು ನಾಯಕನಾಗಿ ನಟಿಸಿರುವ ‘ಇಷ್ಕ್’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಶೇನ್‌ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಬಾಲನಟನಾಗಿ. ಪೃಥ್ವಿರಾಜ್ ಅಭಿನಯದ ‘ತಾಂದೋನ್ನಿ’ ಸಿನಿಮಾದಲ್ಲಿ  ಬಾಲನಟನಾಗಿ ಅಭಿನಯಿಸಿದರು. ಬಳಿಕ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದರು. ಮಂಜು ವಾರಿಯರ್ ಮುಖ್ಯಭೂಮಿಕೆಯಲ್ಲಿದ್ದ ‘ಕೇರ್ ಆಫ್ ಸಾಯಿರಾಭಾನು’ ಮತ್ತು ‘ಕುಂಬಳಂಗಿ ನೈಟ್ಸ್’ ಸಿನಿಮಾಗಳಲ್ಲೂ ಅವರದು ಗಮನಾರ್ಹ ಪಾತ್ರ.

2016ರಲ್ಲಿ ಬಿಡುಗಡೆಗೊಂಡ ‘ಕಿಸ್ಮತ್’ ಮತ್ತು 2018ರಲ್ಲಿ ತೆರೆಕಂಡ ‘ಈಡ’ ಚಿತ್ರದಲ್ಲಿ ಶೇನ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರಗಳಲ್ಲಿ ನಟನೆಯ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

ಇದೀಗ ಸದ್ದು ಮಾಡುತ್ತಿರುವ ‘ಇಷ್ಕ್’ ಸೇರಿದಂತೆ ಶೇನ್ ನಾಯಕನಾಗಿ ನಟಿಸಿರುವ ಮೂರು ಸಿನಿಮಾಗಳಲ್ಲಿ ಸಾಮಾಜಿಕ ಸಮಸ್ಯೆಗಳ ಸುತ್ತವೇ ಕಥೆ ಹೆಣೆಯಲಾಗಿದೆ. ಇದೇ ಮಾಲಿವುಡ್‌ ಪ್ರೇಕ್ಷಕರ ಮನ ಗೆಲ್ಲಲು ಕಾರಣ. ಜೊತೆಗೆ, ಈ ಚಿತ್ರಗಳಲ್ಲಿ ನವಿರು ಪ್ರೇಮ ಕಥೆಯೂ ಇದೆ.

ಶಾನವಾಜ್ ಕೆ‌. ಭವಕುಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಕಿಸ್ಮತ್’ ಚಿತ್ರ ಭಿನ್ನ ಧರ್ಮದ ಜೋಡಿಯ ಪ್ರೇಮ ಕಥೆ ಹೊಂದಿದೆ. ಬಿ. ಅಜಿತ್ ಕುಮಾರ್ ನಿರ್ದೇಶನದ ‘ಈಡ’ ಚಿತ್ರದಲ್ಲಿ ಪ್ರೇಮ ಕಥೆಯ ಜೊತೆ ಉತ್ತರ ಮಲಬಾರ್ ಪ್ರದೇಶದಲ್ಲಿ ನಡೆಯುವ ರಾಜಕೀಯ ಕೊಲೆಗಳು, ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಹರತಾಳಗಳ ಚಿತ್ರಣ ಮೇಳೈಸಿದೆ. ಈ ಕಾರಣಕ್ಕಾಗಿಯೇ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !