ಸೋಮವಾರ, ಆಗಸ್ಟ್ 2, 2021
21 °C

ದರ್ಶನ್ ಜೊತೆ ವ್ಯವಹಾರಿಕ ಸಂಬಂಧ ಮುಗಿದಿದೆ: ನಿರ್ಮಾಪಕ ಉಮಾಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಾನು– ದರ್ಶನ್‌ ಮಧ್ಯೆ ಏನೇನೂ ಭಿನ್ನಾಭಿಪ್ರಾಯ ಇಲ್ಲ. ಏನೇ ವಿವಾದ ಇದ್ದರೂ ನಾಲ್ಕು ಗೋಡೆಯ ಒಳಗೆ ಬಗೆಹರಿಸಿಕೊಳ್ಳುತ್ತೇವೆ. ಸುಮ್ಮನೆ ಪ್ರಚೋದಿಸಬೇಡಿ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹೇಳಿದರು.

'ನಾನು ತಪ್ಪು ಮಾಡಿಲ್ಲವೆಂದಾದರೆ ನಾನೇಕೆ ಹೆದರಬೇಕು. ಕಾನೂನು ಇದೆ ಎಲ್ಲವನ್ನೂಅದು ನೋಡಿಕೊಳ್ಳುತ್ತದೆ’ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲ್ಲಿರುವುದು ಅರುಣಾ ಕುಮಾರಿ ವಿಚಾರ (ನಕಲಿ ಬ್ಯಾಂಕ್‌ ಮ್ಯಾನೇಜರ್‌ ಆಗಿ ಬಂದವರು) ಅದಕ್ಕೆ ನಾನು ಉತ್ತರಿಸಿದ್ದೇನೆ. ಉಳಿದ ಗಲಾಟೆಗಳಿಗೂ ನನಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಲಾಕ್‌ಡೌನ್‌ ಅವಧಿಯಲ್ಲಿ ನನ್ನ ಕಾರನ್ನೇ ಕ್ಲಬ್‌ನ ಒಳಗೆ ಬಿಡಲು ಹಿಂದೆ ಮುಂದೆ ನೋಡಿದರು. ಈಗ ಅರುಣಾ ಕುಮಾರಿ ಅವರನ್ನು ಕ್ಲಬ್‌ನ ಒಳಗೆ ಹೇಗೆ ಬಿಟ್ಟಿರಿ ಎಂದೂ ಕೇಳಿದ್ದೇನೆ’ ಎಂದರು.

'ಆಸ್ತಿ ವಿಚಾರ ಸಂಬಂಧಿಸಿ ಆ ಜಮೀನು ದೊಡ್ಡಮನೆ (ಡಾ.ರಾಜ್‌ಕುಮಾರ್‌) ಕುಟುಂಬಕ್ಕೆ ಸೇರಿದ್ದು. ಅದನ್ನು ದರ್ಶನ್‌ ಕೇಳಿದ್ದು ನಿಜ. ಆದರೆ, ಈ ವ್ಯವಹಾರ ಮುಂದೆ ದೊಡ್ಡದಾಗಿ ಎಲ್ಲೆಲ್ಲಿಗೋ ಹೋಗುತ್ತದೆ ಅನ್ನುವ ಕಾರಣಕ್ಕೆ ಅದನ್ನು ಕೊಡುವುದಿಲ್ಲ ಎಂದು ಹೇಳಿದ್ದೆ. ಅದು ಅಲ್ಲಿಗೇ ಮುಗಿದ ವಿಚಾರ. ಇದನ್ನು ಮುಂದುವರಿಸುವುದು ಬೇಡ. ದರ್ಶನ್‌ ಅವರ ಜೊತೆ ವ್ಯವಹಾರಿಕ ಸಂಬಂಧ ಮುಗಿದಿದೆ. ಆದರೆ ಸಹೋದರ ಸಂಬಂಧ ಇನ್ನೂ ಮುಂದುವರಿದಿದೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು