ಭಾನುವಾರ, ಮಾರ್ಚ್ 26, 2023
23 °C

‘ಬಧಾಯಿ ಹೋ’ ರಿಮೇಕ್‌ನಲ್ಲಿ ನಾಗಚೈತನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಯುಷ್ಮಾನ್‌ ಖುರಾನಾ ನಟನೆಯ ‘ಬಧಾಯಿ ಹೋ’ ಚಿತ್ರವು ತೆಲುಗಿಗೆ ರಿಮೇಕ್‌ ಆಗುತ್ತಿದ್ದು, ಇದರಲ್ಲಿ ನಾಗಚೈತನ್ಯ ನಟಿಸುತ್ತಿದ್ದಾರೆ.

ಖ್ಯಾತ ಚಿತ್ರ ನಿರ್ಮಾಪಕ ಬೋನಿ ಕಪೂರ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಖಚಿತವಾಗಿದ್ದು, ಈಗಾಗಲೇ ಚಿತ್ರದ ರಿಮೇಕ್‌ ಹಕ್ಕನ್ನು ಪಡೆದುಕೊಂಡಿದ್ದಾರೆ.

2018ರಲ್ಲಿ ಬಿಡುಗಡೆಯಾದ ಹಾಸ್ಯ ಪ್ರಧಾನ ಚಿತ್ರ ‘ಬಧಾಯಿ ಹೋ’ ಉತ್ತಮ ಕಲೆಕ್ಷನ್‌ ಮಾಡಿತ್ತು. ಅದಲ್ಲದೇ ಈ ಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.

ಮೂಲ ಚಿತ್ರದಲ್ಲಿ ಆಯುಷ್ಮಾನ್‌ ಖುರಾನಾ ನಿರ್ವಹಿಸಿದ ಪಾತ್ರವನ್ನು ಇಲ್ಲಿ ನಾಗಚೈತನ್ಯ ಮಾಡಲಿದ್ದಾರೆ. ‘ಅವರು ಈ ಚಿತ್ರದ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಸದ್ಯದಲ್ಲೇ ಒಪ್ಪಿಗೆ ನೀಡಲಿದ್ದಾರೆ’ ಎಂದು ಸಿನಿಮಾ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು