ಗುರುವಾರ , ಮಾರ್ಚ್ 23, 2023
22 °C

ಗಾಸಿಪ್‌ಗಳಿಗೆ ನನ್ನ ಹೆಸರನ್ನು ಬಳಸಿಕೊಳ್ಳುವುದು ನೋವು ತಂದಿದೆ: ನಾಗ ಚೈತನ್ಯ ಬೇಸರ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಗಾಸಿಪ್‌ಗಳಿಗೆ ನನ್ನ ಹೆಸರನ್ನು ಬಳಸಿಕೊಳ್ಳುವುದು ನೋವು ತಂದಿದೆ ಎಂದು ತೆಲುಗು ನಟ ನಾಗ ಚೈತನ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ನಾಗ ಚೈತನ್ಯ ಹಾಗೂ ಸಮಂತಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರು ವಿಚ್ಛೇದನ ಪಡೆಯುವ ಹಾದಿಯಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ಫಿಲ್ಮ್ ಕಂಪ್ಯಾನಿಯನ್ ಸೌತ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ನಾಗ ಚೈತನ್ಯ ಹೇಳಿಕೆ ನೀಡಿದ್ದಾರೆ.

'ನಾನು ಮೊದಲಿನಿಂದಲೂ ನನ್ನ ವೈಯಕ್ತಿಕ ಜೀವನವನ್ನು ವೈಯಕ್ತಿಕವಾಗಿ ಮತ್ತು ನನ್ನ ವೃತ್ತಿಪರ ಜೀವನವನ್ನು ವೃತ್ತಿಪರವಾಗಿ ಇರಿಸಿಕೊಂಡಿದ್ದೇನೆ. ನಾನು ಎರಡನ್ನೂ ಎಂದಿಗೂ ಬೆರೆಸಲಿಲ್ಲ. ನನ್ನ ಹೆತ್ತವರಿಂದ ಕಲಿತ ಈ ಅಭ್ಯಾಸವನ್ನು ರೂಢಿಗತ ಮಾಡಿಕೊಂಡಿದ್ದೇನೆ' ಎಂದು ನಾಗ ಚೈತನ್ಯ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ ಎಂದಿರುವ ನಾಗ ಚೈತನ್ಯ ತಮ್ಮ ಬಗ್ಗೆ ಹರಡುತ್ತಿರುವ ಸುಳ್ಳು ವದಂತಿಗಳ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 'ಗಾಸಿಪ್‌ಗಳಿಗೆ ನನ್ನ ಹೆಸರನ್ನು ಬಳಸಿಕೊಳ್ಳುವುದು ನೋವು ತಂದಿದೆ' ಎಂದೂ ಅವರು ತಿಳಿಸಿದ್ದಾರೆ.

ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ನಟಿಸಿರುವ ’ಲವ್‌ ಸ್ಟೋರಿ’ ಸಿನಿಮಾ ಸೆಪ್ಟೆಂಬರ್‌ 24ರಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರಮೋಷನ್‌ ಹಾಗೂ ಪ್ರಚಾರದ ಕೆಲಸಗಳಲ್ಲಿ ನಾಗ ಚೈತನ್ಯ ಭಾಗಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು