ಶನಿವಾರ, ಮೇ 28, 2022
30 °C

ನಾಗ ಶೌರ್ಯ ಹುಟ್ಟುಹಬ್ಬ: ‘ಕೃಷ್ಣ ವೃಂದ ವಿಹಾರಿ’ ಚಿತ್ರದ ಫಸ್ಟ್‌ ಲುಕ್ ಬಿಡುಗಡೆ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಚೆನ್ನೈ: ನಟ ನಾಗ ಶೌರ್ಯ ಅಭಿನಯದ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರಕ್ಕೆ ‘ಕೃಷ್ಣ ವೃಂದ ವಿಹಾರಿ’ ಎಂದು ಹೆಸರಿಡಲಾಗಿದೆ.

ಇಂದು (ಶನಿವಾರ) ನಾಗ ಶೌರ್ಯ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾದ ಟೈಟಲ್‌ ಮತ್ತು ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ.

ಅನೀಶ್ ಆರ್. ಕೃಷ್ಣ ನಿರ್ದೇಶನದ ಈ ಸಿನಿಮಾವನ್ನು ಐರಾ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಜತೆಗೆ ಚಿತ್ರಕ್ಕೆ ಮಹತಿ ಸ್ವರ ಸಾಗರ್ ಸಂಗೀತವಿದ್ದು, ಸಾಯಿ ಶ್ರೀರಾಮ್ ಅವರ ಛಾಯಾಗ್ರಹಣವಿದೆ.

ಈಗಾಗಲೇ ಕಾಮಿಡಿ ಚಿತ್ರಗಳ ಮೂಲಕ ಸೈ ಎನಿಸಿಕೊಂಡಿರುವ ನಾಗ ಶೌರ್ಯ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ‘ಕೃಷ್ಣ ವೃಂದ ವಿಹಾರಿ’ ಚಿತ್ರದ ಒಂದು ಹಾಡನ್ನು ಹೊರತುಪಡಿಸಿ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಓದಿ... ಸುಶಾಂತ್ ಹುಟ್ಟುಹಬ್ಬ: ಅಗಲಿದ ಗೆಳೆಯನನ್ನು ನೆನೆದು ರಿಯಾ ಚಕ್ರವರ್ತಿ ಹೇಳಿದ್ದೇನು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು