ಸೋಮವಾರ, ಮಾರ್ಚ್ 30, 2020
19 °C

ಸೆಕ್ಸ್‌ ವಿಡಿಯೊ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದವನಿಗೆ ಚಳಿ ಬಿಡಿಸಿದ ನಮಿತಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹುಭಾಷೆ ತಾರೆ, ಚೆಂದುಳ್ಳಿ ಚೆಲುವೆ, ಮಾದಕ ಮೈಮಾಟದ ನಟಿ ನಮಿತಾ ಪೋಲಿ ಯುವಕನೊಬ್ಬನಿಗೆ ಸಾಮಾಜಿಕ ಜಾಲತಾಣದಲ್ಲಿ ಚಳಿ ಬಿಡಿಸಿದ್ದಾರೆ.

ತೆಲುಗು ಮತ್ತು ಕನ್ನಡ ಸಿನಿಮಾರಂಗ ಸೇರಿದಂತೆ ಕಾಲಿವುಡ್‌ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಮಿತಾಗೆ ತಮಿಳುನಾಡಿನಲ್ಲಿ ದೇವಾಲಯ ಕಟ್ಟಿ ಆರಾಧಿಸುವ ಅಭಿಮಾನಿಗಳು ಇದ್ದಾರೆ. ಇತ್ತೀಚೆಗೆ ನಮಿತಾ ರಾಜಕಾರಣದಲ್ಲೂ ಸಕ್ರಿಯರಾಗಿರುವ ನಮಿತಾಗೆ ಪೋಲಿ ಯುವಕನೊಬ್ಬ ಕೀಟಲೆ ಮಾಡಿ, ಮಂಗಳಾರತಿ ಮಾಡಿಸಿಕೊಂಡಿದ್ದಾನೆ.

ನಿಮ್ಮ ಅಶ್ಲೀಲ (ಪೊರ್ನ್) ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಯುವಕನ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅವನಿಗೆ ನಮಿತಾ ಚಳಿ ಬಿಡಿಸಿದ್ದಾರೆ.

 ನಿಮ್ಮ ಪೊರ್ನ್ ವಿಡಿಯೊಗಳನ್ನು ನಾನು ನೋಡಿದ್ದೇನೆ, ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ ಮೇಲ್ ಮಾಡಿದ್ದ ಎಂದು ನಮಿತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಆ ಯುವಕನ ಇನ್‌ಸ್ಟಾಗ್ರಾಂ ಖಾತೆಯ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ.

 
 
 
 

 
 
 
 
 
 
 
 
 

Hi all, this one cheap minded, free loser has been calling me names in DM. As you can read he is @i_am_thamizh_senthamizh . He started with name calling like 'Hi Item' . Hence , when I confronted him , he said his account got hacked !!! And when I pursued him, he said he has seen my so called 'PORN' and he's going to publish it online now !!! Knowing the facts, I said pls 'Go ahead '.. See this face people ! This is the face of a Loser, a Cheap minded , Filthy person, who thinks he has Right to call any Woman, with any cheap and dirty names,just because he thinks He Can !!!! Why should I listen to this ?! Just because I'm in Media ?! Just because I'm in a Glamour Industry?! You think you know me ?! You think you know who I'm as a person ??! DO NOT MISTAKE MY SILENCE FOR MY WEAKNESS !! A Real Man knows how to Respect a Woman, Any Woman from Any path of Life, for he knows how it feels if someone will Disrespect his own Mother! Instead of Celebrating Navratri where you pray to Godess Durga for 9 days and instead of Celebrating Women's Day, learn to respect women in your General Life. Because that's what matters at the End of the Day!!

A post shared by Namitha Vankawala Chowdhary (@namita.official) on

ಯುವಕನ ಪೋಟೊವನ್ನು ಶೇರ್ ಮಾಡಿರುವ ನಮಿತಾ, ನನಗೆ ಕೆಟ್ಟದಾಗಿ ಸಂದೇಶಗಳನ್ನು ಕಳುಹಿಸಿ, ಗೌರವಯುತವಲ್ಲದ ಪದಗಳನ್ನು ಬಳಕೆ ಮಾಡಿ, ನನ್ನ ಪೋರ್ನ್ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಹೇಳಿದ್ದ. ಸಾರ್ವಜನಿಕ ಜೀವನದಲ್ಲಿ ಇರುವ ಕಾರಣಕ್ಕೆ ನಾನು ಈ ರೀತಿಯಲ್ಲ ಕರೆಸಿಕೊಳ್ಳಬೇಕೇ ಎಂದು ಪ್ರಶ್ನೆ ಮಾಡಿರುವ ಅವರು ಮೊದಲ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿ ಎಂದು ಹೇಳಿದ್ದಾರೆ. ಒಬ್ಬ ನಿಜವಾದ ಪುರುಷ ಮಹಿಳೆಯನ್ನು ಯಾವ ರೀತಿ ಗೌರವಿಸಬೇಕು ಎಂಬುದನ್ನು ತಿಳಿದಿರುತ್ತಾನೆ ಎಂದು ಬರೆದಿರುವ ನಮಿತಾ, ತಮ್ಮಗಾದ ಕೆಟ್ಟ ಅನುಭವಗಳನ್ನು ವಿವರವಾಗಿ ಬರೆದುಕೊಂಡಿದ್ದಾರೆ.

ಇದಕ್ಕೆ ಸಾಕಷ್ಟು ಅಭಿಮಾನಿಗಳಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನಮಿತಾ ಅಭಿಮಾನಿಗಳು ಅವನಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಮಿತಾ ಆ ಯುವಕನ ಚಿತ್ರ ಹಾಕಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ನಮಿತಾ ಧೈರ್ಯ ಮೆಚ್ಚುವಂತಹದು, ಇನ್ನು ಮುಂದೆ ಕಿರುಕುಳ ಅನುಭವಿಸುವ ಮಹಿಳೆಯರು ಇದೇ ರೀತಿ ಮಾಡಲಿ ಎಂದು ಹಲವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು