ನಂದಿನಿ ರೆಡ್ಡಿ ನಿರ್ದೇಶನದ ಚೊಚ್ಚಲ ಚಿತ್ರ ‘ಓ ಬೇಬಿ’ ಉತ್ತಮ ಯಶಸ್ಸು ಗಳಿಸಿತ್ತು. ಇದರಲ್ಲಿ ನಟಿ ಸಮಂತಾ ಅಕ್ಕಿನೇನಿ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಈಗ ನಂದಿನಿ ರೆಡ್ಡಿ ಅವರ ಹೊಸ ಚಿತ್ರ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ‘ಮಹಾನಟಿ’ ಚಿತ್ರ ನಿರ್ಮಾಣ ಮಾಡಿದ ಸ್ವಪ್ನಾ ಸಿನಿಮಾದ ಸ್ವಪ್ನಾ ದತ್ತಾ ಹಾಗೂ ಪ್ರಿಯಾಂಕಾ ದತ್ತಾ.

‘ಓ ಬೇಬಿ’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿಯೇ ನಂದಿನಿ ರೆಡ್ಡಿ ಈ ಸಿನಿಮಾ ಬಗ್ಗೆ ಘೋಷಣೆ ಮಾಡಿದ್ದರು.ಎರಡನೇ ಸಿನಿಮಾದ ಚಿತ್ರಕತೆ ರೆಡಿ ಮಾಡುತ್ತಿರುವುದಾಗಿಆಗ ಹೇಳಿಕೊಂಡಿದ್ದರು.

ಈಗ ಈ ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, ನಂದಿನಿ ರೆಡ್ಡಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಸ್ವಪ್ನಾ ಸಿನಿಮಾದ ಆರನೇ ಸಿನಿಮಾ.

ಇದು ಲವ್ ಸ್ಟೋರಿ ಸಿನಿಮಾ. ‘ಮಹಾನಟಿ’ ಹಾಗೂ ‘ಓ ಬೇಬಿ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದಮಿಕ್ಕಿ ಜೆ ಮೇಯರ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಲಕ್ಷ್ಮೀ ಭೂಪಾಲ್ ಅವರು ಸಂಭಾಷಣೆ ಬರೆಯಲಿದ್ದಾರೆ. ರಿಚರ್ಡ್ ಪ್ರಸಾದ್ ಛಾಯಾಗ್ರಹಣ ಇದಕ್ಕಿದೆ. ‘ಮಹಾನಟಿ’ ಹಾಗೂ ‘ಓ ಬೇಬಿ’ ಎರಡೂ ಚಿತ್ರಗಳು ಮಹಿಳಾ ಕೇಂದ್ರಿತ ಸಿನಿಮಾಗಳು. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಭಾರಿ ಹಿಟ್ ಗಳಿಸಿತ್ತು.

ಇದನ್ನೂ ಓದಿ:ನಂದಿನಿ ರೆಡ್ಡಿ ಮೂರನೇ ಚಿತ್ರದಲ್ಲಿ ಸಮಂತಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.