ಶುಕ್ರವಾರ, ಆಗಸ್ಟ್ 12, 2022
20 °C

ಸಿನಿಮಾ ಸ್ಕ್ರಿಪ್ಟ್ ಬದಲಾವಣೆ ಕೇಳಿದ ನಾನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಕ್ ಜಗದೀಶ್ ಸಿನಿಮಾದ ಪೋಸ್ಟರ್‌

ನ್ಯಾಚುರಲ್ ಸ್ಟಾರ್ ನಾನಿ ಕಳೆದ ವಾರವಷ್ಟೇ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ‘ವಿ’ ಸಿನಿಮಾದ ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಕ್ಕೆ ದಿಲ್‌ ರಾಜು ಹಣ ಹೂಡಿಕೆ ಮಾಡಿದ್ದರು. ಇಂದ್ರಗಂಟಿ ಮೋಹನ್ ಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ ನಿವೇತಾ ಥಾಮಸ್ ಹಾಗೂ ಅದಿತಿ ರಾವ್ ಹೈದರಿ ಹಾಗೂ ಸುಧೀರ್ ಬಾಬು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದೆಲ್ಲಾ ಈಗ ಹಳೆಯ ವಿಷಯ. ಆದರೆ ನಾನಿಯ ಮುಂದಿನ ‘ಟಕ್‌ ಜಗದೀಶ್‌’ ಸಿನಿಮಾದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಈ ಸಿನಿಮಾಗೆ ‘ನಿನ್ನು ಕೋರಿ’ ಸಿನಿಮಾದ ನಿರ್ದೇಶಕ ಶಿವ ನಿರ್ವಾಣ್ ಆಕ್ಷ್ಯನ್‌ ಕಟ್ ಹೇಳಿದ್ದಾರೆ.

ಸದ್ಯದ ಸುದ್ದಿಯ ಪ್ರಕಾರ ನಾನಿ ನಿರ್ದೇಶಕರ ಬಳಿ ಸಿನಿಮಾ ಸ್ಕ್ರಿಪ್ಟ್‌ನಲ್ಲಿ ಕೊಂಚ ಬದಲಾವಣೆ ಮಾಡಲು ತಿಳಿಸಿದ್ದಾರಂತೆ. ಮೂಲ ಸ್ಕ್ರಿಪ್ಟ್‌ನಲ್ಲಿ ಭಾವನಾತ್ಮಕ ಅಂಶ ಹೆಚ್ಚಿದ್ದು ಮನೋರಂಜನೆಗೆ ಹೆಚ್ಚು ಒತ್ತು ನೀಡುವಂತೆ ಹೇಳಿದ್ದಾರಂತೆ. ‘ವಿ’ ಸಿನಿಮಾದಲ್ಲಿ ನಾನಿ ಕೆಲವು ಕಹಿ ಅನುಭವಗಳನ್ನು ಎದುರಿಸಿರುವುದು ಇದಕ್ಕೆ ಕಾರಣವಿರಬಹುದು ಎನ್ನುತ್ತಿದೆ ಟಾಲಿವುಡ್ ಚಿತ್ರರಂಗ.

‘ಟಕ್ ಜಗದೀಶ್’‌ ಸಿನಿಮಾದ ಶೇ 40 ಭಾಗದ ಶೂಟಿಂಗ್ ಮುಗಿದಿದ್ದು ಉಳಿದ ಭಾಗವನ್ನು ಸೆಪ್ಟೆಂಬರ್ ಅಂತ್ಯದಿಂದ ಆರಂಭಿಸಬಹುದು ಎನ್ನಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು