‘ಪಾತ್ರಕ್ಕಾಗಿ ಪಲ್ಲಂಗ’ (ಕಾಸ್ಟಿಂಗ್ ಕೌಚ್) –ಭಾರತೀಯ ಚಿತ್ರರಂಗದ ಅನಿಷ್ಟ ಪದ್ಧತಿ. ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿವೆ. ಬಹಳಷ್ಟು ನಟಿಯರು ತಾವು ಅನುಭವಿಸಿದ ಈ ನೋವಿನ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ ಚಿತ್ರದಲ್ಲಿ ನಟಿಸಲು ಅಥವಾ ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲು ಹಂಬಲಿಸುವ ಹಲವು ಹುಡುಗಿಯರು ಗ್ಲಾಮರ್ ಲೋಕದ ಕಾಮಕಾಂಡಕ್ಕೆ ಸಿಲುಕುತ್ತಾರೆ. ಚಿತ್ರರಂಗದ ಒಳಸುಳಿಗಳನ್ನು ಅರಿಯದೆ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಾರೆ. ಕೊನೆಯವರೆಗೂ ಅವರಿಗೆ ನ್ಯಾಯ ಸಿಗುವುದಿಲ್ಲ. ಈಗ ಬಾಲಿವುಡ್ನ ಕಾಮಕಾಂಡ ಮತ್ತೊಮ್ಮೆ ಬಯಲಿಗೆ ಬಂದಿದ್ದು, ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಗರಂ ಆಗಿದೆ.

ಈ ಜಾಲದೊಟ್ಟಿಗೆ ನಿರ್ದೇಶಕ ಮಹೇಶ್ ಭಟ್, ನಟಿಯರಾದ ಊರ್ವಶಿ ರೌಟೇಲ, ಇಶಾ ಗುಪ್ತ, ಮೌನಿ ರಾಯ್ ಸೇರಿದಂತೆ ಹಲವರ ಹೆಸರು ತಳುಕು ಹಾಕಿಕೊಂಡಿದೆ. ಈ ಎಲ್ಲರಿಗೂ ಈಗಾಗಲೇ ಆಯೋಗ ನೋಟಿಸ್ ನೀಡಿದೆ. ಆದರೆ, ಯಾರೊಬ್ಬರೂ ಈ ನೋಟಿಸ್ಗೆ ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ. ಇದಕ್ಕೆ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಸಿಟ್ಟಾಗಿದ್ದಾರೆ.

‘ಆಗಸ್ಟ್ 18ರಂದು ಆಯೋಗದ ಸಭೆ ಬೆಳಿಗ್ಗೆ 11.30ಗಂಟೆಗೆ ನಿಗದಿಯಾಗಿದೆ. ಎಲ್ಲರಿಗೂ ಮತ್ತೊಮ್ಮೆ ನೋಟಿಸ್ ಕಳುಹಿಸಿ ಸಭೆಗೆ ಹಾಜರಾಗುವಂತೆ ಸೂಚಿಸಲಾಗುವುದು. ಅಂದು ಸಭೆಗೆ ಗೈರುಹಾಜರಾದರೆ ಆಯೋಗದ ನಿಯಮಾವಳಿ ಅನ್ವಯ ಕ್ರಮ ಜರುಗಿಸಲಾಗುವುದು’ ಎಂದು ಟ್ವಿಟರ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕಾಮಕಾಂಡ ಬೆಳಕಿಗೆ ಬಂದಿದ್ದು ಹೇಗೆ?

ಬಾಲಿವುಡ್ನಲ್ಲಿ ಮಾಡೆಲಿಂಗ್ ಹೆಸರಿನಡಿ ಹುಡುಗಿಯರ ಮೇಲೆ ಲೈಂಗಿಕ ಶೋಷಣೆ ನಡೆಯುತ್ತಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಯೋಗಿತಾ ಭಯಾನಾ, ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಸಂಬಂಧ ಆಡಿಯೊ ಟೇಪ್ವೊಂದನ್ನು ಅವರು ಬಿಡುಗಡೆ ಮಾಡಿದ್ದರು. ಆಗಲೇ ಈ ದುಷ್ಕೃತ್ಯ ಬಯಲಿಗೆ ಬಂದಿದ್ದು.

ಹುಡುಗಿಯರು ಮಾಡೆಲಿಂಗ್ನ ಕನಸು ಕಟ್ಟಿಕೊಂಡು ಬರುವುದು ಸರ್ವೇ ಸಾಮಾನ್ಯ. ಸನ್ನಿ ವರ್ಮಾ ಎಂಬ ವ್ಯಕ್ತಿ ಅಂತಹ ಹುಡುಗಿಯರಿಗೆ ಮೋಸ ಮಾಡುತ್ತಿದ್ದಾನೆ. ತನ್ನ ನೀಚ ಕಾಮದ ಕೆಲಸಗಳಿಗೆ ಅವರನ್ನು ಬಳಸಿಕೊಳ್ಳುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಂದಹಾಗೆ ಈ ಸನ್ನಿ ಇವೆಂಟ್ ಜಾಹೀರಾತುಗಳನ್ನು ಮಾಡುತ್ತಾನೆ. ಮತ್ತೊಂದೆಡೆ ಆತನ ಮಾಡೆಲಿಂಗ್ ಕಾರ್ಯಕ್ರಮಗಳಿಗೆ ಮಹೇಶ್ ಭಟ್ ಸೇರಿದಂತೆ ಬಿಟೌನ್ನ ಹಲವರು ಬೆಂಬಲ ನೀಡಿರುವುದು ಉಂಟು. ಊರ್ವಶಿ ರೌಟೇಲಾ, ಇಶಾ ಗುಪ್ತ, ಮೌನಿ ರಾಯ್ ಅವರು ಆತನ ಇವೆಂಟ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿಯೇ, ಈ ಸೆಲೆಬ್ರಿಟಿಗಳಿಗೆ ಆತನ ಜೊತೆಗೆ ನಂಟು ಇರಬಹುದು. ಹಾಗಾಗಿ, ವಿಚಾರಣೆಗೆ ಹಾಜರಾಗಬೇಕು ಎಂದು ಆಯೋಗ ನೋಟಿಸ್ ಜಾರಿಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.