ಶನಿವಾರ, ಡಿಸೆಂಬರ್ 4, 2021
20 °C

ಗೋವಾ ಬೀಚ್‌ನಲ್ಲಿ ಹಾಲಿಡೇ ಮೂಡ್‌ನಲ್ಲಿ ನಯನತಾರಾ ಹಾಗೂ ಶಿವನ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್‌ ಶಿವನ್ ಮಧ್ಯೆ ಇರುವ ಪ್ರೇಮ ಪ್ರಕರಣದ ಸುದ್ದಿ ಈಗ ಹೊಸತಲ್ಲ. ಈ ಜೋಡಿ ಸಹಜೀವನ ನಡೆಸುತ್ತಿದ್ದು ಎಲ್ಲೆಡೆ ಒಂದಾಗಿ ತಿರುಗುತ್ತಿದ್ದಾರೆ. ಅಲ್ಲದೇ ತಮ್ಮ ಪ್ರೇಮ ಪ್ರಕರಣ ಬಹಿರಂಗವಾದ ಮೇಲೆ ವಿಶ್ವದೆಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ. ಈಗ ಗೋವಾದ ಬೀಚ್ ರೆಸಾರ್ಟ್‌ವೊಂದರಲ್ಲಿ ರಜೆಯ ಮಜಾ ಅನುಭವಿಸುತ್ತಿದೆ ಈ ಜೋಡಿ.  

ಗೋವಾದಲ್ಲಿ ತಾವು ಕ್ಲಿಕ್ಕಿಸಿದ ನಯನತಾರಾ ಫೋಟೊಗಳನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ವಿಘ್ನೇಶ್‌. 

ದಕ್ಷಿಣ ಭಾರತದ ಖ್ಯಾತ ನಟಿ ಎನ್ನಿಸಿಕೊಂಡಿರುವ ನಯನತಾರಾ ತಮ್ಮ ನಟನಾ ವೃತ್ತಿಯಲ್ಲಿ ಸೋಲು ಕಂಡಿದ್ದೇ ಕಡಿಮೆ. ದಕ್ಷಿಣದ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ ಈ ಬೆಡಗಿ. ಪ್ರಿಯಕರ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ ಈ ನಟಿ.

ಆಗಾಗ ದೇಶ–ವಿದೇಶಗಳ ಪ್ರವಾಸಿತಾಣಗಳಿಗೆ ಭೇಟಿ ನೀಡುವ ನಯನತಾರಾ ತಮ್ಮ ಪ್ರವಾಸದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಕೆಲ ದಿನಗಳಿಂದ ಸಹಜೀವನ ನಡೆಸುತ್ತಿದ್ದಾರೆ. ವಿಘ್ನೇಶ್ ನಿರ್ದೇಶನದ ‘ನಾನುಂ ರೌಡಿ ದಾನ್‌’ ಸಿನಿಮಾದಲ್ಲಿ ನಟಿಸಿದ ಬಳಿಕ ನಯನಾತಾರಾ ಪ್ರೀತಿಯಲ್ಲಿ ಬಿದ್ದಿದ್ದರು. ಮೊದಲು ಈ ಜೋಡಿ ಪ್ರೇಮ ಪ್ರಕರಣದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಬಹಿರಂಗವಾದ ಬಳಿಕ ತಾವು ಒಟ್ಟಿಗಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು