ಶುಕ್ರವಾರ, ಅಕ್ಟೋಬರ್ 23, 2020
27 °C

ಒಟಿಟಿಯಲ್ಲಿ ನಯನತಾರಾ ನಟನೆಯ ಮೂಕುತಿ ಅಮ್ಮನ್!‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್‌ ನಯನಾತಾರ. ಮಹಿಳಾ ಪ್ರಧಾನ ಚಿತ್ರಗಳ ಮೂಲಕ ಹೆಚ್ಚು ಖ್ಯಾತಿ ಗಳಿಸಿರುವ ನಯನತಾರಾ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆಯುವುದರಲ್ಲಿ ಅನುಮಾನವೇ ಇಲ್ಲ. ಇದರ ಜೊತೆ ಜೊತೆಗೆ ದಕ್ಷಿಣದ ಸ್ಟಾರ್ ಹೀರೊಗಳ ಜೊತೆ ನಟಿಸಿಯೂ ಸೈ ಎನ್ನಿಸಿಕೊಂಡಿದ್ದಾರೆ ಈ ಸುಂದರಿ.

ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನಿಸಿಕೊಂಡಿರುವ ನಯನಾತಾರಾ ಸದ್ಯ ‘ಮೂಕುತಿ ಅಮ್ಮನ್’‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಕ್ತಿಪ್ರಧಾನವಾದ ಈ ಸಿನಿಮಾದಲ್ಲಿ ನಯನಾತಾರಾ ದೇವಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರವನ್ನು ಹಾಸ್ಯನಟ ಆರ್‌ಜಿ ಬಾಲಾಜಿ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಶೂಟಿಂಗ್‌ ಕೊನೆಯ ಹಂತದಲ್ಲಿದ್ದು ಮೂಲಗಳ ಪ್ರಕಾರ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಡಿಸ್ನಿ ಹಾಟ್‌ಸ್ಟಾರ್ ಸಿನಿಮಾದ ಹಕ್ಕು ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧೀಕೃತವಾಗಿ ಘೋಷಣೆ ಮಾಡಲಿದೆ ಚಿತ್ರತಂಡ.

ಈ ಸಿನಿಮಾವು ಭೂಮಿಗೆ ಬರುವ ದೇವತೆ ಹಾಗೂ ಸಾಮಾನ್ಯ ಮನುಷ್ಯನ ಸುತ್ತ ನಡೆಯುವ ಕತೆಯಾಗಿದೆ. ದೇವಿ ಪಾತ್ರ ಮಾಡುತ್ತಿರುವ ಕಾರಣ ಇಡೀ ಸಿನಿಮಾ ಶೂಟಿಂಗ್‌ ಮುಗಿಯುವವರೆಗೂ ನಯನಾತಾರಾ ಮಾಂಸಾಹಾರ ಸೇವಿಸಿರಲಿಲ್ಲವಂತೆ.

ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ‘ಅಣ್ಣಾತೆ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಈ ಬೆಡಗಿ. ಇಷ್ಟೇ ಅಲ್ಲದೆ ನೇತ್ರಿಕನ್‌, ಕಾಟುವಾಕುಲ ರೆಂಡು ಕಾದಲ್ ಸಿನಿಮಾಗಳೂ ಇವರ ಕೈಯಲ್ಲಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು