ನಟ ನೀನಾಸಂ ಸತೀಶ್ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ ‘ವೈತರಣಿ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಲಂಡನ್‌ನಲ್ಲಿ ನಡೆಯುತ್ತಿದೆ.

ಸತೀಶ್ ಈಗಾಗಲೇ ಲಂಡನ್‌ಗೆ ತೆರಳಿದ್ದು, ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಅವರು ಲಂಡನ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಚಿತ್ರ ಮತ್ತು ಲಂಡನ್ನಿನರಸ್ತೆ ಬದಿಯ ಟೆಲಿಫೋನ್ ಬೂತಿನಲ್ಲಿ ದೂರವಾಣಿ ಕರೆ ಮಾಡುತ್ತಿರುವ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ,ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ. ಲಂಡನ್ನಿನ ವಿವಿಧ ತಾಣಗಳಲ್ಲಿ15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ.

‘ಕಹಿ’ ಚಿತ್ರ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಮಾಂಡ್ರೆ ಬ್ಯಾನರ್‌ನಡಿ ನಟಿ ಶರ್ಮಿಳಾ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

ಮೊದಲ ಹಂತದ ಚಿತ್ರೀಕರಣ ಲಂಡನ್‌ನಲ್ಲಿ ನಡೆದರೆ, ಎರಡನೇ ಹಂತದ ಚಿತ್ರೀಕರಣ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ನಡೆಯಲಿದೆ. ಇದೊಂದು ಮರ್ಡರ್ ಮಿಸ್ಟರಿ ಕಥೆಯ ಚಿತ್ರ.

‘ಅಯೋಗ್ಯ’ ಸಿನಿಮಾದ ನಂತರ ಸತೀಶ್‌ಅವರನ್ನು ಸೆನ್ಸಿಬಲ್ ಸಿನಿಮಾಗಳು ಅರಸಿ ಬರುತ್ತಿವೆ. ಸತೀಶ್ ಅಭಿನಯದ ‘ಬ್ರಹ್ಮಚಾರಿ’ ಬಿಡುಗಡೆಗೆ ಸಜ್ಜಾಗಿದ್ದು, ಇದೇ 29ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಸದ್ಯ ಅವರ ಕೈಯಲ್ಲಿ ‘ಗೋದ್ರಾ’, ‘ಪರಿಮಳ ಲಾಡ್ಜ್’ ಹಾಗೂ ‘ಮೈನೇಮ್ ಇಸ್ ಸಿದ್ಧೇಗೌಡ’ ಚಿತ್ರಗಳು ಇವೆ.‘ಮೈನೇಮ್ ಇಸ್ ಸಿದ್ಧೇಗೌಡ’ ಚಿತ್ರದಲ್ಲಿ ನಾಯಕನಾಗಿ ನಟಿಸುವ ಜತೆಗೆ, ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.