ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಪ್ತಸಾಗರದಾಚೆ ಎಲ್ಲೋ’ ಸೈಡ್‌–ಬಿ ಇಂದು ತೆರೆಗೆ

Published 17 ನವೆಂಬರ್ 2023, 0:30 IST
Last Updated 17 ನವೆಂಬರ್ 2023, 0:30 IST
ಅಕ್ಷರ ಗಾತ್ರ

‘ಸಪ್ತಸಾಗರದಾಚೆ ಎಲ್ಲೋ’ ಸೈಡ್‌–ಬಿ:

ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ, ಚೈತ್ರಾ ಆಚಾರ್‌ ನಟಿಸಿರುವ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಸೈಡ್‌–ಬಿ ಇಂದು(ನ.17) ತೆರೆ ಕಾಣುತ್ತಿದೆ. ಚರಣ್‌ ರಾಜ್‌ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದ್ದು, ತಮ್ಮ ಪರಂವಃ ಸಂಸ್ಥೆ ಮೂಲಕ ರಕ್ಷಿತ್‌ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಸೈಡ್‌–ಎ ನಲ್ಲಿ ಜೈಲು ಸೇರಿದ್ದ ನಾಯಕ ಜೈಲಿನಿಂದ ಹೊರಬಂದ ನಂತರ ನಡೆಯುವ ಕಥೆಯನ್ನು ಈ ಭಾಗ ಹೊಂದಿದೆ. 

ಬೆಂಬಿಡದ ನಾವಿಕ:

ಯುವ ಪ್ರತಿಭೆ ಶ್ರೀಯಾನ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘ಬೆಂಬಿಡದ ನಾವಿಕ’ ಇಂದು ತೆರೆ ಕಾಣುತ್ತಿದೆ. ಮಂಗಳೂರು, ಉಡುಪಿಯಲ್ಲಿ ನಡೆಯುವ ಥ್ರಿಲ್ಲರ್ ಕಥಾವಸ್ತು ಹೊಂದಿರುವ ಚಿತ್ರಕ್ಕೆ ಜಿ.ಮಹೇಶ್ ಬಂಡವಾಳ ಹೂಡಿದ್ದಾರೆ. ಪ್ರಿಯದರ್ಶಿನಿ, ಐಶ್ವರ್ಯ ನಾಯಕಿಯರು. ಮುನ್ನಾ ಮೈಸೂರು ಸಂಗೀತ, ಸತೀಶ್‌ ರಾಜೇಂದ್ರನ್ ಛಾಯಾಗ್ರಹಣ ಚಿತ್ರಕ್ಕಿದೆ. 

ಬಾಯ್‌: 

ಬಂಜಾರ ಸಮುದಾಯದ ಸಂಸ್ಕೃತಿಯ ‘ಬಾಯ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಯುವ ಈ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಪೂಜಾ ನಟಿಸಿದ್ದು, ಮಾಲಾಶ್ರೀ ಸುರೇಶ್ ಬಂಡವಾಳ ಹೂಡಿದ್ದಾರೆ.

ದಿ ವೆಕೆಂಟ್ ಹೌಸ್‌:

ಜಾನೆಟ್ ನರೋನ್ಹಾ ಪ್ರೊಡಕ್ಷನ್ಸ್‌ನ ‘ದಿ ವೆಕೆಂಟ್ ಹೌಸ್‌’ ತೆರೆ ಕಾಣುತ್ತಿದೆ. ನಟಿ ಎಸ್ತರ್‌ ನರೋನ್ಹಾ ನಟನೆಯ ಜೊತೆಗೆ ಚಿತ್ರದ ನಿರ್ದೇಶನ, ನಿರ್ಮಾಣವನ್ನೂ ಮಾಡಿದ್ದಾರೆ. ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಸಿನಿಮಾಕ್ಕಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT