ಹೊಸಬರ ಸಿನಿಮಾಗಳು ಯಶಸ್ವಿಯಾದಾಗ, ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಅಭಿನಂದಿಸುವ ಕೆಲ ನಟರಲ್ಲಿ ರಜನಿಕಾಂತ್ ಕೂಡ ಒಬ್ಬರು. ಕಳೆದ ವಾರ ತೆರೆಕಂಡ ತಮಿಳಿನ ‘ವಿತ್ ಲವ್’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದರ ಬೆನ್ನಲ್ಲೇ ರಜನಿಕಾಂತ್ ಚಿತ್ರತಂಡವನ್ನು ಕರೆಸಿಕೊಂಡು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಇದರ ವಿಡಿಯೊವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರಜನಿಕಾಂತ್ ಮೆಚ್ಚುಗೆ ಮಾತುಗಳಿಗೆ ಶ್ಲಾಘನೆ ವ್ಯಕ್ತವಾಗಿದೆ.

ಅಭಿಶನ್ ಜೀವಿತ್ ನಾಯಕನಾಗಿ ನಟಿಸಿರುವ ಸಿನಿಮಾ ಈಗಾಗಲೇ ₹11 ಕೋಟಿ ಗಳಿಕೆ ಕಂಡಿದೆ. ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರದಲ್ಲಿ ಸಣ್ಣಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಭಿಶನ್ ಅವರಿಗೆ ನಾಯಕನಾಗಿ ಚೊಚ್ಚಲ ಸಿನಿಮಾವಿದು. ಅನಸ್ವರ ರಾಜನ್ ಚಿತ್ರದ ನಾಯಕಿ.

ಮದನ್ ನಿರ್ದೇಶನದ ಈ ಚಿತ್ರಕ್ಕೆ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಕೂಡ ಬಂಡವಾಳ ಹೂಡಿದ್ದಾರೆ. ನವಿರಾದ ಪ್ರೇಮಕಥೆ ಹೊಂದಿರುವ ಚಿತ್ರಕ್ಕೆ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.