ಗುರುವಾರ , ಜನವರಿ 30, 2020
20 °C

ಹೊಸ ವರ್ಷಕ್ಕೆ ಶುಭಾಶಯ ಕೋರಿದ ಶಿವಣ್ಣ, ಸುದೀಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಡಿನ ಜನರಿಗೆ ಮತ್ತು ಅಭಿಮಾನಿಗಳಿಗೆ ನಟರಾದ ಶಿವರಾಜ್‌ಕುಮಾರ್‌ ಮತ್ತು ಸುದೀಪ್‌ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ.

‘ಹಳೆಯ ನೆನಪು ಹೊಸ ಹುರುಪು
ಹಳೆಯ ತಪ್ಪಿನಿಂದ ಕಲಿ
ಹೊಸ ಜೋಷಿನಲ್ಲಿ ನಲಿ
ಏನೇ ಇರಲಿ ಏನೇ ಬರಲಿ
ಹೊಸ ವರ್ಷ 2020
ಎಲ್ಲಾ ಒಳ್ಳೆದಾಗಲಿ’ ಎಂದು ‘ಸೆಂಚುರಿ ಸ್ಟಾರ್‌’ ಶಿವರಾಜ್‌ಕುಮಾರ್‌ ಶುಭಾಶಯ ಕೋರಿದ್ದಾರೆ.

ಕಿಚ್ಚನ ಶುಭಾಶಯ

‘2020ಗೆ ಹೆಜ್ಜೆಯಿಡುವ ಮುನ್ನ ಈ ವರ್ಷದ ನಿಮ್ಮ ಹೆಜ್ಜೆಗುರುತುಗಳತ್ತ ಒಮ್ಮೆ ಕಣ್ಣಾಯಿಸಿ ನೋಡಿ. ಈ ವರ್ಷದಲ್ಲಿ ನೀವು ಕಳೆದ ಅಮೂಲ್ಯ ಕ್ಷಣಗಳು ಮತ್ತು ಜೊತೆಯಾದ ವ್ಯಕ್ತಿಗಳು! ನೀವು ಕ್ಷಮೆ ಕೇಳಬೇಕಾದವರು ಮತ್ತು ನಿಮ್ಮಿಂದ ಕ್ಷಮೆಗೆ ಕಾದಿರುವವರು. ಬೇರೆಯವರಿಂದ ನಿಮಗೆ ಸಿಕ್ಕ ಒಳ್ಳೆಯದು ಮತ್ತು ನಿಮ್ಮಿಂದ ಬೇರೆಯವರಿಗಾದ ಒಳ್ಳೆಯದು!’ ಎಂದು ಕಿಚ್ಚ ಸುದೀಪ್‌ ಶುಭಾಶಯ ಕೋರಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು