ಭಾನುವಾರ, ಆಗಸ್ಟ್ 25, 2019
21 °C

ಪಾತ್ರಗಳ ಆಯ್ಕೆ ನಿತ್ಯಾ ‘ಚೂಸಿ’

Published:
Updated:
Prajavani

ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್‌ ‘ಮಿಷನ್‌ ಮಂಗಲ್‌’ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಇದಲ್ಲದೇ ನಿತ್ಯಾ ನಟಿಸಿರುವ ‘ಓ ಕಾದಲ್‌ ಕಣ್ಮಣಿ’  ಹಿಂದಿಯಲ್ಲಿ ‘ಓಕೆ ಜಾನು’ ಹೆಸರಿನಲ್ಲಿ ರಿಮೇಕ್‌ ಆಗಿದೆ.

ಉತ್ತಮ ನಟನೆಗಾಗಿ ಮೂರು ಬಾರಿ ಫಿಲಂಫೇರ್‌ನಲ್ಲಿ ‘ಅತ್ಯುತ್ತಮ ನಾಯಕಿ’ ಪ್ರಶಸ್ತಿ ಪಡೆದಿದ್ದಾರೆ. ಈ ನಟಿಗೆ ಈಗ ಬಾಲಿವುಡ್‌ನಲ್ಲೂ ಸಾಲು ಸಾಲು ಅವಕಾಶಗಳು ಬರುತ್ತಿವೆ. ಆದರೆ ‘ಪಾತ್ರಗಳ ಆಯ್ಕೆಯಲ್ಲಿ ನಾನು ಚೂಸಿ’ ಎನ್ನುತ್ತಾರೆ ನಿತ್ಯಾ.

‘ಬಾಲಿವುಡ್‌ ಸಿನಿಮಾ ಎಂದಾಕ್ಷಣ ನಾನು ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳಲಾರೆ. ‘ಮಿಷನ್‌ ಮಂಗಲ್‌’ ಸಿನಿಮಾ ಒಪ್ಪಿಕೊಳ್ಳುವ ಮುಂಚೆಯೂ ನನ್ನ ತತ್ವ ಇದೇ ಆಗಿತ್ತು. ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ನಟಿಸುವಾಗಲೂ ನಾನು ಪಾತ್ರಗಳ ಪ್ರಾಮುಖ್ಯತೆಯನ್ನು ಗಮನಿಸುತ್ತಿದ್ದೆ. ಚಿತ್ರಕ್ಕೆ ಅಗತ್ಯವಿದ್ದಾಗ ಸಣ್ಣ ಪಾತ್ರಗಳನ್ನೂ ಮಾಡಿದ್ದೇನೆ. ನಾಯಕಿಯಾಗಿಯೇ ನಟಿಸಬೇಕು ಎಂದೇನಿಲ್ಲ’ ಎಂದೂ ಹೇಳಿಕೊಂಡಿದ್ದಾರೆ. 

Post Comments (+)