ನಟ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಮತ್ತು ನಟಿ ಕೀರ್ತಿ ಕಲ್ಕೆರೆ ನಟನೆಯ ‘ಓ ಮೈ ಲವ್’ ಚಿತ್ರವು ಬಿಡುಗಡೆಗೆ ಸಜ್ಜಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ ಪ್ರೊಮೊ ಹಾಡನ್ನು ಶಶಿಕುಮಾರ್ ಇತ್ತೀಚೆಗೆ ಬಿಡುಗಡೆಗೊಳಿಸಿದರು.

ಈ ಸಿನಿಮಾದ ಹಾಡುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಎಂದು ಚಿತ್ರದ ನಿರ್ದೇಶಕ ಸ್ಮೈಲ್ ಶ್ರೀನು ತಿಳಿಸಿದ್ದಾರೆ. ಶ್ರೀನು ಅವರೇ ಸಿನಿಮಾಗೆ ಚಿತ್ರಕತೆ-ಸಂಭಾಷಣೆ ಬರೆದಿದ್ದಾರೆ. ‘ಮಗ ಬಣ್ಣದ ಲೋಕಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾನೆ. ಬಿ.ಇ ಮುಗಿಸಿ ಚಿತ್ರರಂಗಕ್ಕೆ ಬರುವುದಾಗಿ ತಿಳಿಸಿದ. ಮುಹೂರ್ತದಂದು ಚಿತ್ರೀಕರಣದ ಸ್ಥಳಕ್ಕೆ ಹೋಗಿದ್ದು ಬಿಟ್ಟರೆ ಇಂದೇ ಅವನ ನಟನೆಯನ್ನು ತುಣುಕುಗಳಲ್ಲಿ ನೋಡಿದ್ದೇನೆ. ಒಂದೇ ಪಾತ್ರಕ್ಕೆ ಸೀಮಿತವಾಗದೆ ಎಲ್ಲ ಪಾತ್ರಗಳನ್ನು ಮಾಡು ಎಂದು ಸಲಹೆ ನೀಡಿದ್ದೇನೆ’ ಎಂದರು ಶಶಿಕುಮಾರ್.

ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚಿತ್ರವು ತೆರೆಗೆಬರಲಿದ್ದು, ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ರಿಯಲ್ ಸತೀಶ್ ಸಾಹಸ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿ. ಮುರಳಿ ನೃತ್ಯ ನಿರ್ದೇಶನವಿದೆ. ನಿರ್ದೇಶಕ ಎಸ್.ನಾರಾಯಣ್,ತೆಲುಗು ಖಳನಟ ದೇವ್ಗಿಲ್ ಸೇರಿದಂತೆ ದೀಪಿಕಾ ಆರಾಧ್ಯ, ಪೃಥ್ವಿರಾಜ್, ಎಸ್. ನಾರಾಯಣ್, ಸಾಧು ಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ , ಶಿಲ್ಪಾ, ರವಿ ರಾಮ್ ಕುಮಾರ್ ತಾರಾ ಬಳಗದಲ್ಲಿದ್ದಾರೆ.

ಬಾದಾಮಿಯಲ್ಲಿ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.