ನಕಲಿ ಇ–ಮೇಲ್ ಪ್ರಕರಣ: ಹೃತಿಕ್ ರೋಷನ್ ವಿಚಾರಣೆಗೆ ಹಾಜರು
ಮುಂಬೈ: ನಕಲಿ ಇ–ಮೇಲ್ ಪ್ರಕರಣ ಸಂಬಂಧ ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಶನಿವಾರ ಮುಂಬೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದರು.
ದಕ್ಷಿಣ ಮುಂಬೈನಲ್ಲಿರುವ ಆಯುಕ್ತರ ಕಚೇರಿಗೆ ಬೆಳಿಗ್ಗೆ 11.45ಕ್ಕೆ ಆಗಮಿಸಿದ ಹೃತಿಕ್, ಅಪರಾಧ ಗುಪ್ತಚರ ಘಟಕದ(ಸಿಐಯು) ಮಂದೆ ವಿಚಾರಣೆಗೆ ಹಾಜರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
2016ರಲ್ಲಿ ಹೃತಿಕ್ ರೋಷನ್ ಅವರು ‘ತಮ್ಮ ಹೆಸರಿನಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ನಕಲಿ ಮೇಲ್ ಕಳುಹಿಸಲಾಗುತ್ತಿದೆ’ ಎಂದು ದೂರು ದಾಖಲಿಸಿದ್ದರು. ಈ ಸಂಬಂಧ ಹೇಳಿಕೆ ದಾಖಲಿಸುವಂತೆ ಹೃತಿಕ್ ರೋಷನ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.