ಭಾನುವಾರ, ಆಗಸ್ಟ್ 25, 2019
23 °C

ಪಾರವ್ವನ ಕನಸು ಹಾಡುಗಳ ಬಿಡುಗಡೆ

Published:
Updated:
Prajavani

ಸಿ. ಮಲ್ಲಿಕಾರ್ಜುನ್ ನಿರ್ದೇಶನದ ‘ಪಾರವ್ವನ ಕನಸು’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ಒಂದು ಹಳ್ಳಿಯಲ್ಲಿ ಕೂಲಿ ಕೆಲಸ ಮಾಡುವ ಮಹಿಳೆ ಪಾರವ್ವ. ತಾನು ಇರುವ ಹಳೆ ಮನೆಯನ್ನು ಕೆಡವಿ, ಒಳ್ಳೆಯ ಮನೆ ಕಟ್ಟಿಸಿ, ತನ್ನ ಇಬ್ಬರು ಮಕ್ಕಳಿಗೆ ಒಳ್ಳೆಯ ದಾರಿ ತೋರಿಸಬೇಕು ಎಂಬುದು ಪಾರವ್ವಳ ಆಸೆ.

ಬೇಜವಾಬ್ದಾರಿ ಕುಡುಕ ಗಂಡನನ್ನು ಸರಿದಾರಿಗೆ ತರಬೇಕು ಎಂಬ ಆಸೆಯೂ ಆಕೆಯಲ್ಲಿರುತ್ತದೆ. ಈ ಆಸೆಗಳನ್ನೆಲ್ಲ ಹೊತ್ತು ಬೆಂಗಳೂರಿಗೆ ಬರುವ ಪಾರವ್ವ ಮುಂದೆ ಏನಾಗುತ್ತಾಳೆ ಎಂಬುದು ಚಿತ್ರದ ಕಥೆ. ಆರ್. ಸುರೇಶ್ ಕುಮಾರ್, ರಶ್ಮಿತಾ, ಅಪೂರ್ವಶ್ರೀ, ಆಂಜನಪ್ಪ, ಶಿವಕುಮಾರ್ ಆರಾಧ್ಯ ತಾರಾಗಣದಲ್ಲಿ ಇದ್ದಾರೆ.

ಚಿಕ್ಕಮಗಳೂರು, ಮಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಸುರೇಶ್‍ ಕುಮಾರ್ ಅವರು ನಾಯಕನಾಗಿ ನಟಿಸಿದ್ದಾರೆ, ನಿರ್ಮಾಪಕ ಆಗಿ ಹಣ ಹೂಡಿದ್ದಾರೆ.

Post Comments (+)