ಬಾಲಿವುಡ್ನಲ್ಲಿ ಈಗ ಬಯೋಪಿಕ್ಗಳದ್ದೇ ಹವಾ. ಕಳೆದ ಕೆಲವು ವರ್ಷ ಸಾಲು ಸಾಲು ಬಯೋಪಿಕ್ಗಳು ತೆರೆಗೆ ಬಂದಿವೆ. ಆ ಸಾಲಿಗೆ ಈಗ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ. ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಅಬ್ದುಲ್ ಕಲಾಂ ಅವರ ಜೀವನಕತೆ ಆಧಾರಿತ ಸಿನಿಮಾ ಬಾಲಿವುಡ್ನಲ್ಲಿ ಸೆಟ್ಟೇರಲಿದೆ. ಹಿರಿಯ ನಟ ಪರೇಶ್ ರಾವಲ್ ಅವರು ಅಬ್ದುಲ್ ಕಲಾಂ ಪಾತ್ರ ನಿರ್ವಹಿಸಲಿದ್ದಾರೆ.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಜೀವನ ಕತೆ ಆಧರಿತ ಚಿತ್ರ ತೆರೆಗೆ ಬರಲಿದೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದ ಹರಿದಾಡುತಿತ್ತು. ಈ ಸುದ್ದಿಯನ್ನು ಪರೇಶ್ ರಾವಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಬ್ದುಲ್ ಕಲಾಂ ಪಾತ್ರವನ್ನು ತಾವೇ ನಿರ್ವಹಿಸುತ್ತಿರುವುದಾಗಿ ಎಂದು ಹೇಳಿಕೊಂಡಿದ್ದಾರೆ.

ಈ ಸಿನಿಮಾವನ್ನು ಅಭಿಷೇಕ್ ಅಗರ್ವಾಲ್ ಹಾಗೂ ಅನಿಲ್ ಸುಂಕರ ಅವರು ನಿರ್ಮಾಣ ಮಾಡಲಿದ್ದಾರೆ. ಮುಂದಿನ ಕೆಲ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದು ಅಭಿಷೇಕ್ ಹೇಳಿದ್ದಾರೆ.ಈ ಸಿನಿಮಾದಲ್ಲಿ ಕಲಾಂ ಜೀವನ ಹಾಗೂ ಪೋಖ್ರಾನ್ ಅಣುಬಾಂಬ್ ಪರೀಕ್ಷೆ ಕುರಿತು ಕತೆ ಇರಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.