ಸೋಮವಾರ, ಆಗಸ್ಟ್ 19, 2019
22 °C

ಪರಿಣಿತಿಗೆ ಹಾಲಿವುಡ್‌ ಕನಸು

Published:
Updated:
Prajavani

ಸಹೋದರಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ ಸಿನಿಮಾಗಳ ಕಡೆ ಮುಖ ಮಾಡಿದಾಗಿನಿಂದ ನಟಿ ಪರಿಣಿತಿ ಚೋಪ್ರಾ ಎಲ್ಲೇ ಹೋದರೂ ಹಾಲಿವುಡ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳುತ್ತಿದ್ದಾರಂತೆ. ಕೊನೆಗೂ ಮೌನ ಮುರಿದ ಪರಿಣಿತಿ ತಮ್ಮ ಹಾಲಿವುಡ್‌ ಕನಸನ್ನು ತೆರೆದಿಟ್ಟಿದ್ದಾರೆ. ‘ಹೌದು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಲು ನನಗೂ ಆಸಕ್ತಿ ಇದೆ. ಆದರೆ ಈಗ ಸದ್ಯ ಬಾಲಿವುಡ್‌ನಲ್ಲಿ ಒಪ್ಪಿಕೊಂಡ ಕೆಲಸವನ್ನು ಶ್ರದ್ಧೆಯಿಂದ ಮುಗಿಸಬೇಕಿದೆ’ ಎಂದಿದ್ದಾರೆ.

‘ಹಾಲಿವುಡ್‌ನ ಆ್ಯಕ್ಷನ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಕನಸು ಎಲ್ಲರಂತೆ ನನಗೂ ಇದೆ’ ಎಂದು ಅವರು ಹೇಳಿದ್ದಾರೆ.

ಸಿದ್ಧಾರ್ಥ್‌ ಮಲ್ಹೋತ್ರ ಅವರೊಂದಿಗೆ ‘ಜಬರಿಯಾ ಜೋಡಿ’ ಸಿನಿಮಾದಲ್ಲಿ ಪರಿಣಿತಿ ನಟಿಸುತ್ತಿದ್ದಾರೆ. ‘ಸಿದ್ಧಾರ್ಥ್‌ ಹಾಗೂ ನನ್ನನ್ನು ‘ಜಬರಿಯಾ ಜೋಡಿ’ಯಲ್ಲಿ ನೋಡಿ ನೀವು ಖಂಡಿತ ಖುಷಿಪಡುತ್ತೀರಿ. ಅತ್ಯುತ್ತಮವಾದ ಪಾತ್ರವೊಂದನ್ನು ಮಾಡಿದ ಖುಷಿ ನನಗಿದೆ. ಮರಾಠಿ ಸಿನಿಮಾದಲ್ಲಿ ನಟಿಸುವ ಆಸೆ ಇದೆ. ಅಲ್ಲಿ ಕಡಿಮೆ ಎಂದರೂ ವರ್ಷಕ್ಕೆ ನಾಲ್ಕೈದು ಅತ್ಯುತ್ತಮ ಸಿನಿಮಾಗಳು ಬರುತ್ತಿವೆ. ಆ ಭಾಷೆ ಕಲಿತು ನಾನು ನಟಿಸುತ್ತೇನೆ’ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಲಕ್ಕಿ

ಮೊದಲ ಬಾರಿಗೆ ಪ್ರಿಯಾಂಕಾ ಪತಿ ನಿಕ್‌ ಜೋನಸ್‌ ಬಗ್ಗೆ ಪ‍ರಿಣಿತಿ ಮುಕ್ತವಾಗಿ ಮಾತನಾಡಿದ್ದಾರೆ. ‘ನಿಕ್‌ಗೆ ಅವರ ಕುಟುಂಬದವರು ತುಂಬಾ ಬೆಂಬಲ ನೀಡುತ್ತಾರೆ. ಎಲ್ಲರೂ ಯಾವಾಗಲೂ ಅವರ ಹಿಂದೆ, ಮುಂದೆಯೇ ಇರುತ್ತಾರೆ. ಎಲ್ಲರೊಂದಿಗೂ ಅವರು ಬೆರೆಯುವ ರೀತಿ ನನಗೆ ತುಂಬಾ ಇಷ್ಟ. ‘ಸಣ್ಣ ಸಣ್ಣ ಖುಷಿಯನ್ನು ಅನುಭವಿಸು’ ಎಂದು ಅವರು ನನಗೆ ಯಾವಾಗಲೂ ಹೇಳುತ್ತಾರೆ. ವಯಸ್ಸು ಚಿಕ್ಕದಾದರೂ ಅವರಿಗೆ ತುಂಬಾ ಪ್ರಬುದ್ಧತೆ ಇದೆ. ಪ್ರಿಯಾಂಕಾ ನಿಜವಾಗಲೂ ಲಕ್ಕಿ’ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

Post Comments (+)