ಕಾರ್ತಿಕ್ ಅನನ್ಯಾ ಜೋಡಿ ತೆರೆಗೆ

ಬಾಲಿವುಡ್‌ನ ಮುದ್ದಾದ ಜೋಡಿ ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ ತೆರೆಯಲ್ಲಿ ಪತಿ–ಪತ್ನಿಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. 1978ರಲ್ಲಿ ತೆರೆ ಕಂಡ ಯಶ್ ಚೋಪ್ರಾ ನಿರ್ದೇಶನದ ‘ಪತಿ ಪತ್ನಿ ಔರ್ ವೋ’ ಚಿತ್ರದ ರೀಮೇಕ್‌ನಲ್ಲಿ ಈ ಜೋಡಿ ರೊಮ್ಯಾನ್ಸ್ ಮಾಡಲಿದೆ. ಚಿತ್ರಕ್ಕೆ ಮತ್ತೊಬ್ಬ ನಾಯಕಿಯಾಗಿ ಭೂಮಿ ಪೆಡ್ನೇಕರ್ ಆಯ್ಕೆಯಾಗಿದ್ದಾರೆ. ಭೂಮಿ, ಪತ್ನಿಯ ಪಾತ್ರ ಮಾಡಲಿದ್ದು, ನಾಯಕನ ಪ್ರೇಮಿಯಾಗಿ ಅನನ್ಯಾ ನಟಿಸಲಿದ್ದಾರೆ ಎಂದು ಹೇಳಲಾಗಿದೆ.
ಚೋಪ್ರಾ ಚಿತ್ರದಲ್ಲಿ ಪತಿ, ಪತ್ನಿ ಮತ್ತು ಆಕೆಯ ಪಾತ್ರಗಳನ್ನು ಸಂಜೀವ್ ಕುಮಾರ್, ವಿದ್ಯ ಸಿನ್ಹಾ ಮತ್ತು ರಂಜೀತಾ ಕೌರ್ ಮಾಡಿದ್ದರು. ಈ ಚಿತ್ರವನ್ನು 70ರ ದಶಕದ ಶ್ರೇಷ್ಠ ಚಿತ್ರಗಳಲ್ಲಿ ಒಂದು ಎಂದು ಇಂದಿಗೂ ಬಿ ಟೌನ್ ಸ್ಮರಿಸುತ್ತದೆ. ತ್ರಿಕೋನ ಪ್ರೇಮ ಕತೆಯನ್ನು ಒಳಗೊಂಡ ಮೂಲ ಚಿತ್ರಣವನ್ನು ಯಥಾವತ್ ಉಳಿಸಿಕೊಂಡರೂ ಸಂಭಾಷಣೆ ಮತ್ತು ಸನ್ನಿವೇಶಗಳನ್ನು ಸಮಕಾಲೀನ ಪ್ರೇಕ್ಷಕರು ಮೆಚ್ಚುವಂತೆ ನಿರೂಪಿಸಲಾಗುತ್ತದೆ ಎನ್ನಲಾಗಿದೆ. ದುಲ್ಹಾ ಮಿಲ್ ಗಯಾ, ಹ್ಯಾಪಿ ಭಾಗ್ ಜಾಯೇಗಿ ಮತ್ತು ಹ್ಯಾಪಿ ಫಿರ್ ಭಾಗ್ ಜಾಯೇಗಿ ಚಿತ್ರಗಳ ನಿರ್ದೇಶಕರಾದ ಮುದಸ್ಸರ್ ಅಜೀಜ್ ಅವರೇ ‘ಪತಿ ಪತ್ನಿ..’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ನಿರ್ಮಾಪಕರಾದ, ಟಿ ಸೀರೀಸ್‌ನ ಭೂಷಣ್ ಕುಮಾರ್, ಬಿ. ಆರ್ ಸ್ಟುಡಿಯೋಸ್‌ನ ಜುನೋ ಚೋಪ್ರಾ ಮತ್ತು ಅಭಯ್ ಚೋಪ್ರಾ ಅವರು ಈ ಚಿತ್ರದ ಮೂಲಕ ಮತ್ತೆ ಒಂದಾಗಲಿದ್ದಾರೆ. ‘ಭೂತ್‌ನಾಥ್ ರಿಟರ್ನ್ಸ್’ ನಿರ್ಮಿಸಿದ್ದ ನಿರ್ಮಾಪಕರು ಇವರು.
‘ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಈಗಿನ ಕಾಲದ ಹಾಟ್ ನಟರು. ಹಾಗಾಗಿ ‘ಪತಿ ಪತ್ನಿ ಔರ್ ವೋ’ ಚಿತ್ರಕ್ಕೆ ಈ ಜೋಡಿಯೇ ಸೂಕ್ತ’ ಎಂದು ಚೋಪ್ರಾದ್ವಯರು ಅಭಿಪ್ರಾಯಪಟ್ಟಿದ್ದಾರೆ. ಇದೇ ಏಪ್ರಿಲ್‌ನಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.
ಬರಹ ಇಷ್ಟವಾಯಿತೆ?
1
0
0
0
0
0 comments
View All