ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ‘ಪೆದ್ರೊ’ ಶೀಘ್ರದಲ್ಲೇ ತೆರೆಗೆ

Last Updated 25 ಫೆಬ್ರುವರಿ 2022, 11:18 IST
ಅಕ್ಷರ ಗಾತ್ರ

ಬೂಸಾನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಬಿಎಫ್‌ಐ ಲಂಡನ್‌ ಚಲನಚಿತ್ರೋತ್ಸವ,‘ಫೆಸ್ಟಿವಲ್‌ ದೆ 3 ಕಾಂಟಿನೆಂಟ್ಸ್‌’ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳ ಜೊತೆಗೆ ಮೆಚ್ಚುಗೆಯನ್ನೂ ಪಡೆದಿರುವ ನಟೇಶ್‌ ಹೆಗಡೆ ನಿರ್ದೇಶನದ ಸಿನಿಮಾ ‘ಪೆದ್ರೊ’ ಶೀಘ್ರದಲ್ಲೇ ತೆರೆಗೆ ಬರಲಿದೆ.

ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ವಿಭಿನ್ನ ಶೈಲಿಯ ನಿರೂಪಣೆ ಹಾಗೂ ಹಿನ್ನೆಲೆ ಸಂಗೀತದಿಂದ ಪ್ರೇಕ್ಷಕರನ್ನು ಸೆಳೆದಿದೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ನಟೇಶ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ‘ಪೆದ್ರೊ’ ಮಧ್ಯಮ ವರ್ಗದ ಎಲೆಕ್ಟ್ರಿಷಿಯನ್‌ ಒಬ್ಬನ ಕಥೆಯಾಗಿದ್ದು, ಈ ಚಿತ್ರವನ್ನು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ವೆಟ್ರಿಮಾರನ್‌ ಅವರು ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ತನ್ನ ಮುದ್ದಿನ ನಾಯಿಯನ್ನು ಕೊಂದ ಹಂದಿಯನ್ನು ಗುಂಡಿಕ್ಕಿ ಹೊಡೆಯಲು ಹೋದ ಸಂದರ್ಭದಲ್ಲಿ ಆದ ಅನಾಹುತವೇ ಚಿತ್ರದ ಕಥೆಯ ಎಳೆ ಎಂಬುವುದು ಟ್ರೇಲರ್‌ನಲ್ಲಿ ಸ್ಪಷ್ಟ. ನಟ ರಾಜ್‌ ಬಿ.ಶೆಟ್ಟಿ ಅವರೂ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಮುಖ್ಯಭೂಮಿಕೆಯಲ್ಲಿ ನಟೇಶ ಅವರ ತಂದೆ ಗೋಪಾಲಕೃಷ್ಣ ಹೆಗಡೆಯವರೇ ನಟಿಸಿದ್ದಾರೆ.

‘ಪೆದ್ರೊ’ ಚಿತ್ರದ ನಿರ್ದೇಶನಕ್ಕಾಗಿ ನಟೇಶ ಹೆಗಡೆ ಅವರಿಗೆ ಖ್ಯಾತ ‘ಪಿಂಗ್ಯಾವ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT