ಸೋಮವಾರ, ಮಾರ್ಚ್ 1, 2021
29 °C

ಪಿಕೆ ಸೀಕ್ವೆಲ್‌: ವಿಧು ವಿನೋದ್ ಚೋಪ್ರಾ ಉತ್ತರವೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಬಾಲಿವುಡ್ ನಟ ಅಮೀರ್ ಖಾನ್ ನಟನೆಯ ಸಿನಿಮಾ ‘ಪಿಕೆ’. 2014ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳಿ ಎಬ್ಬಿಸಿತ್ತು. 3 ಈಡಿಯಟ್ ಬಳಿಕ ಅಮಿರ್‌ ಹಾಗೂ ರಾಜ್‌ಕುಮಾರ್ ಹಿರಾನಿ ಸಾರಥ್ಯದಲ್ಲಿ ಬಂದ 2ನೇ ಸಿನಿಮಾ ಇದಾಗಿತ್ತು.

ಈ ಚಿತ್ರದ ಕೊನೆಯಲ್ಲಿ ರಣಬೀರ್ ಕಪೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮೀರ್ ಸ್ನೇಹಿತನಾಗಿದ್ದ ರಣಬೀರ್ ಏಲಿಯನ್ ಪಾತ್ರದಲ್ಲಿ ಮನರಂಜಿಸಿದ್ದರು.

ಸದ್ಯ ಬಾಲಿವುಡ್‌ ಮಿಡಿಯಾಗಳ ಪ್ರಕಾರ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಪಿಕೆ ಸೀಕ್ವೆಲ್‌ ಮಾಡುವುದಾಗಿ ತಿಳಿಸಿದ್ದಾರೆ. ‘ನನಗೆ ಪಿಕೆ ಸೀಕ್ವೆಲ್ ಮಾಡುವ ಯೋಚನೆ ಇದೆ ಮತ್ತು ಇದು ಚಿತ್ರಕಥೆ ಬರೆಯುವ ಅಭಿಜಿತ್ ಜೋಶ್‌ ಅವರ ಮೇಲೆ ಅವಲಂಬಿತವಾಗಿದೆ’ ಎಂದಿದ್ದಾರೆ.

‘ಸೀಕ್ವೆಲ್‌ಗೆ ಸಂಬಂಧಿಸಿ ಅಭಿಜಿತ್ ಇನ್ನೂ ಸ್ಕ್ರಿಪ್ಟ್ ಬರೆದಿಲ್ಲ, ಒಮ್ಮೆ ಅವರು ಸ್ಕ್ರಿಪ್ಟ್ ಬರೆದು ಮುಗಿಸಿದ ಬಳಿಕ ಸಿನಿಮಾ ಮಾಡಲಾಗುತ್ತದೆ. ಸೀಕ್ವೆಲ್‌ನಲ್ಲಿ ರಣಬೀರ್ ಮುಖ್ಯಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ’ ಎಂದಿದ್ದಾರೆ.

ರಣಬೀರ್ ಸದ್ಯ ಆ್ಯಕ್ಷನ್ ಫ್ಯಾಂಟಸಿ ಕಥೆ ಹೊಂದಿರುವ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೂ ಟಾಲಿವುಡ್‌ ಸ್ಟಾರ್ ನಾಗಾರ್ಜುನ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು