ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊನ್ನಿಯಿನ್‌ ಸೆಲ್ವನ್ ದಾಖಲೆ ಗಳಿಕೆ

Last Updated 1 ಅಕ್ಟೋಬರ್ 2022, 5:23 IST
ಅಕ್ಷರ ಗಾತ್ರ

ಮಣಿರತ್ನಂ ನಿರ್ದೇಶನ ಐತಿಹಾಸಿಕ ಚಿತ್ರ ಪೊನ್ನಿಯಿನ್‌ ಸೆಲ್ವನ್‌ಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಶ್ವದ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ದಾಖಲೆಯ ಗಳಿಕೆ ಕಂಡ ಈ ವರ್ಷದ ತಮಿಳು ಚಿತ್ರವಾಗಿ ಪೊನ್ನಿಯಿನ್‌ ಹೊರಹೊಮ್ಮಿದೆ. ಮೊದಲ ದಿನವೇ ತಮಿಳುನಾಡಿನಲ್ಲಿ ₹25.8 ಕೋಟಿ ಕೋಟಿ ಗಳಿಸಿದ ಚಿತ್ರ, ರಾಜಮೌಳಿಯ ಆರ್‌ಆರ್‌ಆರ್‌ ಮತ್ತು ಕಮಲ್‌ಹಾಸನ್‌ ವಿಕ್ರಂ ನಂತರದ ಸ್ಥಾನದಲ್ಲಿದೆ. ಸಿನಿಮಾ ವಹಿವಾಟು ವಿಶ್ಲೇಷಕ ಮನೊಬಲ ವಿಜಯ್‌ಬಾಲನ್‌ ಪ್ರಕಾರ ಪೊನ್ನಿಯಿನ್‌, ವಲಿಮೈ(₹36.1 ಕೋಟಿ) ಮತ್ತು ಬೀಸ್ಟ್‌ (₹26.4 ಕೋಟಿ) ನಂತರ ಈ ವರ್ಷ ಭರ್ಜರಿ ಓಪನಿಂಗ್‌ ಕಂಡ ಮೂರನೆ ಚಿತ್ರ.

ಹಿಂದಿ ವಲಯದಲ್ಲಿಯೂ ಪೊನ್ನಿಯಿನ್‌ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಸುಮಾರು ₹1.7 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಹಿಂದಿ ರಾಜ್ಯಗಳಲ್ಲಿ ಹೃತಿಕ್‌, ಸೈಫ್‌ ಅಲಿಖಾನ್‌ ನಟನೆಯ ವಿಕ್ರಂ ವೇದಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಮೊದಲ ದಿನ ₹11.5 ಕೋಟಿ ಗಳಿಸಿದೆ.

ಅಮೆರಿಕ, ಆಸ್ಟ್ರೇಲಿಯಾದಲ್ಲೂ ಪೊನ್ನಿಯಿನ್‌ ಸೆಲ್ವನ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವಿಮರ್ಶಕ ರಮೇಶ್‌ ಬಾಲ ಹೇಳಿದ್ದಾರೆ.
ಚಿಯಾನ್‌ ವಿಕ್ರಂ, ಐಶ್ವರ್ಯಾ ರೈ, ಜಯರಾಂ ರವಿ, ಕಾರ್ತಿ, ತ್ರಿಷಾ ಮೊದಲಾದ ದೊಡ್ಡ ತಾರಾ ಬಳಗವನ್ನು ಹೊಂದಿರುವ ಚಿತ್ರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2019ರಿಂದ 150 ದಿನಗಳ ಕಾಲ ಚಿತ್ರದ ಎರಡೂ ಭಾಗಗಳನ್ನು ಚಿತ್ರೀಕರಿಸಲಾಗಿದೆ ಎಂದು ನಟ ಜಯರಾಂ ರವಿ ಸಂದರ್ಶನವೊಂದರಲ್ಲಿ ಹೇಳಿದ್ದರು. 1955ರಲ್ಲಿ ಪ್ರಕಟಿತ ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಐತಿಹಾಸಿಕ ಚಿತ್ರ. ಹೀಗಾಗಿ ಮಣಿರತ್ನಂ ಸುಂದರ ದೃಶ್ಯಗಳನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಎ.ಆರ್‌.ರೆಹಮಾನ್‌ ದೃಶ್ಯಗಳಿಗೆ ತಕ್ಕಂತೆ ಅತ್ಯದ್ಬುತ ಸಂಗೀತ ನೀಡಿದ್ದಾರೆ ಎಂದು ಬಹುತೇಕ ವಿಮರ್ಶಕರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT