ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊನ್ನಿಯಿನ್​ ಸೆಲ್ವನ್ ಟ್ರೇಲರ್‌ ಬಿಡುಗಡೆ: ಚೋಳ ಸಾಮ್ರಾಜ್ಯದ ಗತವೈಭವ ಕಣ್ಮುಂದೆ!

Last Updated 7 ಸೆಪ್ಟೆಂಬರ್ 2022, 9:20 IST
ಅಕ್ಷರ ಗಾತ್ರ

ಬೆಂಗಳೂರು: ಮಣಿರತ್ನಂನಿರ್ದೇಶನದ ಬಹುನಿರೀಕ್ಷಿತ ‘ಪೊನ್ನಿಯಿನ್​ ಸೆಲ್ವನ್–1’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಚಿತ್ರರಸಿಕರ ಗಮನ ಸೆಳೆದಿದೆ.

‘ಟಿಪ್ಸ್’ ಯುಟ್ಯೂಬ್ ಚಾನಲ್‌ನಲ್ಲಿ‘ಪೊನ್ನಿಯಿನ್​ ಸೆಲ್ವನ್’ನ ತಮಿಳು, ತೆಲುಗು, ಕನ್ನಡ, ಮಲೆಯಾಳಂ ಹಾಗೂ ಹಿಂದಿ ಭಾಷೆಯ ಟ್ರೇಲರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಸದ್ದು ಮಾಡಿದೆ. ಟ್ರೇಲರ್‌ಗೆ ಹಿನ್ನೆಲೆ ಧ್ವನಿಯನ್ನು ನಟ ಕಮಲ್ ಹಾಸನ್ ನೀಡಿದ್ದಾರೆ. ಚೆನ್ನೈನಲ್ಲಿ ಮಂಗಳವಾರ ಸಂಜೆ ಟ್ರೇಲರ್‌ ಬಿಡುಗಡೆ ಸಮಾರಂಭವನ್ನು ಚಿತ್ರತಂಡ ಆಯೋಜಿಸಿತ್ತು.

‘ಪೊನ್ನಿಯಿನ್​ ಸೆಲ್ವನ್’ ಚಿತ್ರದ ಮೊದಲ ಭಾಗವು ಸೆ.30ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

1955ರಲ್ಲಿ ಕಲ್ಕಿ ಕೃಷ್ಣಮೂರ್ತಿಯವರು ಬರೆದ ಚೋಳ ಸಾಮ್ರಾಜ್ಯದರಾಜ ಅರುಲ್ಮೋಳಿ ವರ್ಮನ್ ಅವರ ಜೀವನಚರಿತ್ರೆ ಒಳಗೊಂಡಿರುವ ಕಾದಂಬರಿ ಆಧರಿಸಿ ‘ಪೊನ್ನಿಯಿನ್​ ಸೆಲ್ವನ್’ ಸಿನಿಮಾ ಸಿದ್ಧವಾಗಿದೆ.

ಈ ಚಿತ್ರದಲ್ಲಿ ತಮಿಳು ಮತ್ತು ಹಿಂದಿ ಚಿತ್ರರಂಗದ ಪ್ರಮುಖಕಲಾವಿದರು ನಟಿಸಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕೆ ಎ.ಆರ್​. ರೆಹಮಾನ್​ ಸಂಗೀತ ನಿರ್ದೇಶನವಿದೆ.

ಈ ಚಿತ್ರವನ್ನು ತಮಿಳಿನ ‘ಲೈಕಾ ಪ್ರೊಡಕ್ಷನ್​’ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ಗಮನ ಸೆಳೆಯುತ್ತಿವೆ.

ಚಿತ್ರದಲ್ಲಿ ಬಾಲಿವುಡ್ ನಟಿ ​ ಐಶ್ವರ್ಯಾ ರೈ ಬಚ್ಚನ್, ತ್ರಿಷಾ, ನಟ​ರಾದ ವಿಕ್ರಮ್‌, ಕಾರ್ತಿ, ಪ್ರಕಾಶ್ ರಾಜ್, ಜಯರಾಮ್ ಮೊದಲಾದವರ ದೊಡ್ಡ ತಾರಾಗಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT