ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಪೂಜಾ ಹೆಗ್ಡೆ ಸಂಭಾವನೆ ಹೆಚ್ಚಿಸಿಕೊಂಡಿದ್ದೇಕೆ?

Last Updated 28 ಜುಲೈ 2020, 10:47 IST
ಅಕ್ಷರ ಗಾತ್ರ

ನಟಿ ಪೂಜಾ ಹೆಗ್ಡೆ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್‌ ಹೀರೊಯಿನ್. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್‌ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಆಕೆಗೆ ಅವಕಾಶಗಳ ಹೆಬ್ಬಾಗಿಲು ತೆರೆದಿದೆ. ಆಕೆ ಹಿಂದಿಯಲ್ಲಿ ನಟಿಸಿದ ಮೊದಲ ಚಿತ್ರ ‘ಮೊಹೆಂಜೊದಾರೊ’. ಹೃತಿಕ್‌ ರೋಷನ್‌ ನಾಯಕರಾಗಿದ್ದ ಈ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಅಷ್ಟೊಂದು ಯಶಸ್ಸು ಕಾಣಲಿಲ್ಲ. ಹಾಗೆಂದು ಆಕೆಗೆ ಅವಕಾಶಗಳು ಕಡಿಮೆಯಾಗಲಿಲ್ಲ.

ಟಾಲಿವುಡ್‌ ಹೊರತುಪಡಿಸಿದರೆ ಬಾಲಿವುಡ್‌ನಲ್ಲೂ ಆಕೆಗೆ ಅಭಿಮಾನಿ ಬಳಗ ದೊಡ್ಡದಿದೆ. ಅವಕಾಶ ಹೆಚ್ಚಿದ ನಡುವೆಯೇ ಪೂಜಾ ಸಂಭಾವನೆಯ ಮೊತ್ತವನ್ನೂ ಹೆಚ್ಚಿಸಿಕೊಂಡಿರುವ ಸುದ್ದಿ ಟಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ.

ಬೆಲ್ಲಮಕೊಂಡ ಶ್ರೀನಿವಾಸ್‌ ನಾಯಕರಾಗಿದ್ದ ‘ಸಾಕ್ಷ್ಯಂ’ ಚಿತ್ರಕ್ಕೂ ಪೂಜಾ ನಾಯಕಿಯಾಗಿದ್ದರು. ಆ ಸಿನಿಮಾದಲ್ಲಿನ ನಟನೆಗೆ ₹ 1.50 ಕೋಟಿ ಸಂಭಾವನೆ ಪಡೆದಿದ್ದರು. ಇದು ಅವರು ಇಲ್ಲಿಯವರೆಗೆ ಪಡೆದಿರುವ ಅತಿಹೆಚ್ಚಿನ ಸಂಭಾವನೆಯಾಗಿತ್ತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ ಹಿಟ್‌ ಆದ ಅಲ್ಲು ಅರ್ಜುನ್‌ ನಾಯಕರಾಗಿದ್ದ ‘ಅಲಾ ವೈಕುಂಠಪುರಮುಲೋ’ ಚಿತ್ರದಲ್ಲಿನ ನಟನೆಗಾಗಿ ಆಕೆ ಪಡೆದ ಸಂಭಾವನೆಯ ಮೊತ್ತ ₹ 1.40 ಕೋಟಿ.

ಕೋವಿಡ್‌–19 ಪರಿಣಾಮ ಚಿತ್ರೋದ್ಯಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕೆಲವು ನಟ, ನಟಿಯರು, ನಿರ್ದೇಶಕರು ಸಂಭಾವನೆಯ ಕಡಿತಕ್ಕೆ ಮುಂದಾಗಿದ್ದಾರೆ. ಆ ಮೂಲಕ ನಿರ್ಮಾಪಕರ ಮೇಲಿನ ಹೊರೆ ಕಡಿಮೆ ಮಾಡುವುದು ಅವರ ಇರಾದೆ. ಆದರೆ, ಕೋವಿಡ್‌ ಸಂಕಷ್ಟದಲ್ಲಿ ಪೂಜಾ ಸಂಭಾವನೆಯ ಮೊತ್ತವನ್ನು ₹ 2 ಕೋಟಿಗೆ ಹೆಚ್ಚಿಸಿಕೊಂಡಿರುವುದು ಟಾಲಿವುಡ್‌ನ ಹಲವು ನಿರ್ಮಾಪಕರ ಹುಬ್ಬೇರುವಂತೆ ಮಾಡಿದೆ.

ಪ್ರಸ್ತುತ ಪ್ರಭಾಸ್‌ ನಟನೆಯ ‘ರಾಧೆ ಶ್ಯಾಮ್‌’ ಚಿತ್ರದಲ್ಲಿನ ನಟನೆಗಾಗಿ ಆಕೆ ₹ 1 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಅಂದಹಾಗೆ ‘ಅಲಾ ವೈಕುಂಠಪುರಮುಲೋ’ ಸಿನಿಮಾಕ್ಕೂ ಮೊದಲೇ ಈ ಚಿತ್ರಕ್ಕೆ ಅವರು ಸಹಿ ಹಾಕಿದ್ದರಂತೆ. ಹಾಗಾಗಿ, ಇದು ಕಡಿಮೆ ಸಂಭಾವನೆಯಾಗಿದೆ. ಹೊಸ ಚಿತ್ರಗಳಲ್ಲಿನ ನಟನೆಗೆ ಪೂಜಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನುವುದು ಟಾಲಿವುಡ್‌ ಅಂಗಳದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT