ಶುಕ್ರವಾರ, ಮಾರ್ಚ್ 31, 2023
22 °C

ನಟಿ ಪೂಜಾ ಹೆಗ್ಡೆಯ ಇನ್‌ಸ್ಟಾಗ್ರಾಂ ಹ್ಯಾಕ್; ರೊಚ್ಚಿಗಿದ್ದ ಸಮಂತಾ ಅಭಿಮಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Pooja Hegde

ನವದೆಹಲಿ: ದಯವಿಟ್ಟು ಯಾವುದೇ ಆಮಂತ್ರಣವನ್ನು ಸ್ವೀಕರಿಸಬೇಡಿ, ಯಾರ ಜತೆಯೂ ನಿಮ್ಮ ಮಾಹಿತಿ ಹಂಚಿಕೊಳ್ಳಬೇಡಿ. ನನ್ನ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ, ಇದನ್ನು ಸರಿ ಪಡಿಸಲು ನನ್ನ ಡಿಜಿಟಲ್ ತಂಡ ಸಹಾಯ ಮಾಡುತ್ತದೆ ಎಂದು ರಾತ್ರಿ 12.37ರ ಹೊತ್ತಲ್ಲಿ ನಟಿ ಪೂಜಾ ಹೆಗ್ಡೆ ಟ್ವೀಟಿಸಿದ್ದರು.

ಇದಾಗಿ ಒಂದು ಗಂಟೆಯ ನಂತರ ಮತ್ತೊಂದು ಟ್ವೀಟ್ ಮಾಡಿದ ನಟಿ ನನ್ನ ಇನ್‌ಸ್ಟಾಗ್ರಾಂ ಖಾತೆಯ ಸುರಕ್ಷತೆ ಬಗ್ಗೆ ಕಳೆದ ಒಂದು ಗಂಟೆಯಿಂದ ತಲೆಕೆಡಿಸಿಕೊಂಡಿದ್ದೆ. ಈ ಹೊತ್ತಲ್ಲಿ ನನಗೆ ಸಹಾಯ ಮಾಡಿದ ನನ್ನ ಟೆಕ್ನಿಕಲ್ ತಂಡಕ್ಕೆ ಧನ್ಯವಾದಗಳು. ಕೊನೆಗೂ ನನಗೆ ನನ್ನ ಇನ್‌ಸ್ಟಾಗ್ರಾಂ ವಾಪಸ್ ಸಿಕ್ಕಿತು. ಕಳೆದ ಒಂದು ಗಂಟೆಯಲ್ಲಿ ನನ್ನ ಖಾತೆಯಲ್ಲಿ ಅಪ್‌ಲೋಡ್ ಆಗಿರುವ ಮತ್ತು ಕಳುಹಿಸಿರುವ ಸಂದೇಶಗಳನ್ನು ಅಳಿಸಲಾಗುತ್ತಿದೆ ಎಂದು ಹೇಳಿದ್ದರು. 

ಪೂಜಾ ಹೆಗ್ಡೆ ಪೋಸ್ಟ್ ಇತ್ತೀಚಿನ ಪೋಸ್ಟ್‌ಗಳೆಲ್ಲವೂ ಡಿಲೀಟ್ ಆಗಿದ್ದು ಮೂರು ದಿನಗಳ ಹಿಂದೆ ಸಾಕುಪ್ರಾಣಿಗೆ ನೀಡುವ ಆಹಾರದ ಬಗ್ಗೆ ಹಾಕಿದ ಫೋಟೊ ಮಾತ್ರ ಉಳಿದುಕೊಂಡಿದೆ.

ಪೂಜಾ ಹೆಗ್ಡೆ ಇನ್‌ಸ್ಟಾಗ್ರಾಂ ಹ್ಯಾಕ್ ಆಗಿರುವುದು ಸುದ್ದಿಯಾಗಿ ಪೂಜಾ ಹೆಗ್ಡೆ ಟ್ರೆಂಡ್ ಆದ ಬೆನ್ನಲ್ಲೇ #PoojaMustApologizeSamantha ಎಂಬ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಆದಾಗ್ಯೂ ಪೂಜಾ ಹೆಗಡೆ ತಮ್ಮ ಟ್ವೀಟ್‌ಗಳಲ್ಲಿ ಎಲ್ಲಿಯೂ ಸಮಂತಾ ಹೆಸರು ಉಲ್ಲೇಖಿಸಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ ಪೂಜಾ ಹೆಗ್ಡೆ ಖಾತೆಯಿಂದ ಸಮಂತಾ ಬಗ್ಗೆ ಮೀಮ್ ಒಂದು ಪೋಸ್ಟ್ ಆಗಿದ್ದು, ಆಕೆ ಸುಂದರಿಯೇನೂ ಅಲ್ಲ ಎಂಬುದು ಆ ಮೀಮ್‌ನಲ್ಲಿದೆ. ಇದರಿಂದ ಸಿಟ್ಟುಗೊಂಡ ಸಮಂತಾ ಅಭಿಮಾನಿಗಳು ಪೂಜಾ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ತೆಲುಗು ನಟಿ ಆಗಿರುವ ಪೂಜಾ ಹೆಗ್ಡೆ  ಬಾಲಿವುಡ್ ಸಿನಿಮಾ 'ಮೊಹೆಂಜದಾರೊ' ಮತ್ತು 'ಹೌಸ್‌ಫುಲ್ 4'ರಲ್ಲಿ ನಟಿಸಿದ್ದಾರೆ. ಸಮಂತಾ ರುತ್ ಪ್ರಭು ಅವರ ಮೈದುನ ಅಖಿಲ್ ಅಕ್ಕಿನೇನಿ ಅವರ ಜತೆ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾದಲ್ಲಿ ಪೂಜಾ ನಾಯಕಿಯಾಗಿದ್ದು, ಸಿನಿಮಾ ಇನ್ನೂ ತೆರೆ ಕಂಡಿಲ್ಲ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು