ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ನಿರಾಸೆ

Last Updated 24 ಅಕ್ಟೋಬರ್ 2018, 13:11 IST
ಅಕ್ಷರ ಗಾತ್ರ

‘ನನ್ನ ಹುಟ್ಟುಹಬ್ಬದಂದು ವಿಶೇಷ ಸುದ್ದಿಯನ್ನು, ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲಿದ್ದೇನೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡು ಕುತೂಹಲ ಕೆರಳಿಸಿದ್ದ ತೆಲುಗಿನ ನಟ ಪ್ರಭಾಸ್, ತನ್ನ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದ್ದಾರೆ.

ಹುಟ್ಟುಹಬ್ಬದಂದು ಮದುವೆ ಬಗ್ಗೆ ಪ್ರಭಾಸ್ ನಮ್ಮೊಂದಿಗೆ ಹಂಚಕೊಳ್ಳಲಿದ್ದಾರೆ ಎಂದು ಕೋಟ್ಯಂತರ ಅಭಿಮಾನಿಗಳು ಭಾವಿಸಿದ್ದರು. ಆದರೆ, ಯಾವುದೇ ಸಂತಸದ ವಿಚಾರ ಹಂಚಿಕೊಳ್ಳದೆ ಸುಮ್ಮನಾಗಿದ್ದಾರೆ. ಅವರ ಬದಲಿಗೆ, ಅಭಿನಯದ ‘ಸಾಹೊ’ ಚಿತ್ರದ ಮೇಕಿಂಗ್ ವಿಡಿಯೊವನ್ನು ಚಿತ್ರತಂಡ ಬಿಡುಗಡೆ ಮಾಡಿ ಜನ್ಮದಿನದ ಉಡುಗೊರೆ ನೀಡಿದೆ.

ನಟಿ ಅನುಷ್ಕಾ ಶೆಟ್ಟಿ ಜತೆಗೆ ಪ್ರಭಾಸ್ ಮದುವೆಯಾಗಲಿದ್ದಾರೆ ಅನ್ನುವ ಗಾಳಿಮಾತುಗಳೂ ತೇಲಿ ಬಂದಿದ್ದವು. ಈ ಮಾತುಗಳನ್ನು ಪ್ರಭಾಸ್ ತಮ್ಮ ಹುಟ್ಟುಹಬ್ಬದಂದೇ ಖಾತರಿ ಪಡಿಸಲಿದ್ದಾರೆ ಎನ್ನಲಾಗಿತ್ತು.

ಇನ್ನು, ಬಿಡುಗಡೆಗೊಂಡ ಮೇಕಿಂಗ್ ವಿಡಿಯೊ ‘ಸಾಹೊ’ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ಶೇಡ್ಸ್‌ಆಫ್‌ಸಾಹೊ’ ಹ್ಯಾಶ್ ಟ್ಯಾಗ್ ಅಡಿ ಚಿತ್ರತಂಡವು ಬಿಡುಗಡೆ ಮಾಡಿದ್ದ ಈ ವಿಡಿಯೊ, ದುಬೈನಲ್ಲಿ ನಡೆದ ಚಿತ್ರೀಕರಣವನ್ನು ಒಳಗೊಂಡಿದೆ. ಪ್ರಭಾಸ್‌ಗೆ ಚಿತ್ರದಲ್ಲಿ ಜೋಡಿಯಾಗಿರುವ ಶ್ರದ್ಧಾ ಕಪೂರ್ ಸಹ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.

1.22 ನಿಮಿಷದ ವಿಡಿಯೊದ ಕೊನೆಯ ಭಾಗದಲ್ಲಿ ಕಾಣುವ ಪ್ರಭಾಸ್, ಕೂಲಿಂಗ್ ಗ್ಲಾಸ್‌ ಧರಿಸಿ ಎರಡು ಕೈಗಳನ್ನು ಪ್ಯಾಂಟಿನ ಜೇಬುಗಳಿಗೆ ಇಳಿಸಿ, ಏನನ್ನೋ ಜಗಿಯುತ್ತಾ ಸ್ಟೈಲಿಶ್ ಆಗಿ ಹೆಜ್ಜೆ ಹಾಕಿದ್ದಾರೆ. ವಿಡಿಯೊ ಬಿಡುಗಡೆಯಾದ 5 ಗಂಟೆಯೊಳಗೆ 2 ಲಕ್ಷಕ್ಕೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದಾರೆ.

ಬಾಹುಬಲಿ ನಂತರ ಸಾಹೊ ಪ್ರಭಾಸ್ ಅಭಿನಯದ ಮೊದಲ ಸಿನಿಮಾ. ಸುಜೀತ್ ಅವರ ಈ ಸಿನಿಮಾ ನಿರ್ದೇಶಿಸಿದ್ದರೆ, ಕೆನ್ನಿ ಬೇಟ್ಸ್ ಸಾಹಸ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT