ಬಾಹುಬಲಿ: ದಿ ಬಿಗಿನಿಂಗ್ ಚಿತ್ರ ತೆರೆಕಂಡು ಆರು ವರ್ಷ ಕಳೆದಿದ್ದು, ಚಿತ್ರದ ನಾಯಕ ಪ್ರಭಾಸ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಚಿತ್ರವು ಜುಲೈ 10, 2015 ರಂದು ಬಿಡುಗಡೆಯಾಗಿತ್ತು. ಅಲ್ಲದೆ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 600 ಕೋಟಿ ರೂ. ಗಳಿಕೆ ಕಂಡಿತ್ತು. ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣನ್, ಸತ್ಯರಾಜ್ ಮತ್ತು ನಾಸರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಬಾಹುಬಲಿ ಬಿಡುಗಡೆಯಾಗಿ ಇಂದಿಗೆ ಆರು ವರ್ಷ ಪೂರೈಸಿರುವ ಬೆನ್ನಲ್ಲೇ ಸದ್ಯ ರಾಧೆ ಶ್ಯಾಮ ಚಿತ್ರದ ಕೊನೆ ಹಂತದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಇಂದು ತಮ್ಮ ಯಶಸ್ವಿ ಚಿತ್ರದ ಶಿವಲಿಂಗವನ್ನು ಎತ್ತುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. 'ಬಾಹುಬಲಿ ಸಿನಿಮಾ ಬಿಡುಗಡೆಯಾಗಿ ಆರು ವರ್ಷ ತುಂಬಿದೆ. ದೇಶ ಮತ್ತು ಪ್ರಪಂಚದಾದ್ಯಂತ ಸಿನಿಮೀಯ ಮ್ಯಾಜಿಕ್ ಅಲೆಗಳನ್ನು ಸೃಷ್ಟಿಸಿದ ತಂಡ ಇಲ್ಲಿದೆ' ಎಂದು ಚಿತ್ರದ ನಿರ್ದೇಶಕ ಸೇರಿದಂತೆ ಪ್ರಮುಖರನ್ನು ಇನ್‌ಸ್ಟಾಗ್ರಾಂ ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ.
ಬಾಹುಬಲಿ: ದಿ ಬಿಗಿನಿಂಗ್ ಚಿತ್ರವನ್ನು ಅರ್ಕಾ ಮೀಡಿಯಾ ವರ್ಕ್ಸ್ ಎಂಬ ಬ್ಯಾನರ್ ಅಡಿಯಲ್ಲಿ ಶೋಬು ಯರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ ಜಂಟಿಯಾಗಿ ನಿರ್ಮಿಸಿದ್ದರು. 180 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿತ್ತು. ಇದುವರೆಗಿನ ಸಿನಿಮಾಗಳ ಪೈಕಿ ಅತ್ಯಂತ ದುಬಾರಿ ಭಾರತೀಯ ಚಿತ್ರ ಎಂಬ ಖ್ಯಾತಿ ಪಡೆದಿತ್ತು. ಅನೇಕ ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರವು ವಿಶ್ವದಾದ್ಯಂತ 600 ಕೋಟಿ ರೂ. ಗಳಿಕೆ ಕಂಡಿತ್ತು.
ಬಾಹುಬಲಿ ಸಿನಿಮಾವು ವಾಣಿಜ್ಯಿಕವಾಗಿ ಯಶಸ್ವಿಯಾದ ತ್ತು ಪ್ರಾದೇಶಿಕ ಸಿನೆಮಾವೊಂದು ಜಾಗತಿಕವಾಗಿ ಯಶಸ್ಸು ಕಂಡ ಚಿತ್ರ. ಈ ಚಿತ್ರವು ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್ ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರ ಮುಂದುವರಿದ ಭಾಗ, ಬಾಹುಬಲಿ: ದಿ ಕನ್‌ಕ್ಲೂಷನ್ ಏಪ್ರಿಲ್ 28, 2017 ರಂದು ಬಿಡುಗಡೆಯಾಯಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.