ಪ್ರಭಾಸ್ ಇತ್ತೀಚೆಗೆ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರವು ಜಾಗತಿಕವಾಗಿ ₹1000 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿತ್ತು.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಮಲ್ ಹಾಸನ್ ₹25 ಲಕ್ಷ , ಸೂರ್ಯ, ಜ್ಯೋತಿಕಾ ಮತ್ತು ಕಾರ್ತಿ ₹50 ಲಕ್ಷ, ಮಮ್ಮುಟ್ಟಿ ₹20 ಲಕ್ಷ, ದುಲ್ಕರ್ ಸಲ್ಮಾನ್ ₹15 ಲಕ್ಷ, ಫಹಾದ್ ಫಾಸಿಲ್ ಮತ್ತು ನಜ್ರಿಯಾ ₹25 ಮತ್ತು ಟೊವಿನೋ ಥಾಮಸ್ ₹25 ಲಕ್ಷ, ನಟ ಚಿರಂಜೀವಿ ಮತ್ತು ರಾಮ್‌ಚರಣ್ ₹1 ಕೋಟಿ ನೀಡಿದ್ದಾರೆ ಎಂದು ವರದಿಯಾಗಿದೆ.