ಶುಕ್ರವಾರ, ಜನವರಿ 24, 2020
21 °C

ಏರುತ್ತಿದೆ ಪ್ರಭಾಸ್‌ ಸಂಭಾವನೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

ಈಚೆಗೆ ನಟ ಪ್ರಭಾಸ್‌ ನಟನೆಯ ‘ಸಾಹೋ’ ಚಿತ್ರವು ನಿರೀಕ್ಷಿಸಿದಷ್ಟು ಬಾಕ್ಸ್‌ಆಫೀಸ್‌ನಲ್ಲಿ ಹಿಟ್‌ ಆಗಿಲ್ಲ. ಆದರೆ ಇದು ಪ್ರಭಾಸ್‌ ಸಂಭಾವನೆ ಮೇಲೆ ಯಾವುದೇ ಪರಿಣಾಮ ಬೀರಿದ ಹಾಗಿಲ್ಲ.

‘ಬಾಹುಬಲಿ’ ಖ್ಯಾತಿಯ ಈ ನಟ ಹೊಸ ಚಿತ್ರಕ್ಕೆ ಸಹಿ ಮಾಡಿದ್ದು, ಸಂಭಾವನೆಯನ್ನೂ ಪಡೆದುಕೊಂಡಿದ್ದಾರೆ. ಮೈತಿ ಮೂವಿ ಮೇಕರ್ಸ್‌ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಸಂಭಾವನೆ ಪ್ರಭಾಸ್‌ ಕೈಸೇರಿದ್ದು, ಅಡ್ವಾನ್ಸ್‌ ಆಗಿ ₹13 ಕೋಟಿ ಪಡೆದಿದ್ದಾರೆ.

ಈಚೆಗಿನ ಗಾಳಿಸುದ್ದಿ ಪ್ರಕಾರ, ಈ ಹೊಸ ಸಿನಿಮಾಕ್ಕೆ ಈ ಹಿಂದೆ ಮೈತಿ ಮೂವಿ ಮೇಕರ್ಸ್‌ ₹5 ಕೋಟಿ ಚೆಕ್‌ ನೀಡಿದ್ದರು. ಈಗ ಎರಡನೇ ಬಾರಿ ₹8 ಕೋಟಿ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಸಿನಿಮಾ ಚಿತ್ರೀಕರಣಕ್ಕೂ ಮುಂಚಿತವಾಗಿ ಪ್ರಭಾಸ್‌ ₹13 ಕೋಟಿ ಸಂಭಾವನೆಯನ್ನು ತಮ್ಮ ಮುಂದಿನ ಚಿತ್ರಕ್ಕೆ ಪಡೆದುಕೊಂಡಿದ್ದಾರೆ. 

‘ಬಾಹುಬಲಿ’ ಚಿತ್ರಕ್ಕೆ ಮೊದಲ ಭಾಗಕ್ಕೆ ₹25 ಕೋಟಿ ಸಂಭಾವನೆ ಪಡೆದುಕೊಂಡಿದ್ದ ಅವರು, ಎರಡನೇ ಭಾಗಕ್ಕೆ ಅದಕ್ಕಿಂತ ಜಾಸ್ತಿ ಸಂಭಾವನೆ ಪಡೆದುಕೊಂಡಿದ್ದರು. ‘ಸಾಹೋ’ ಚಿತ್ರಕ್ಕೂ ಅವರು ಭರ್ಜರಿಯಾಗೇ ಸಂಭಾವನೆಯನ್ನು ಪಡೆದುಕೊಂಡಿದ್ದರು. ಈಗ ಈ ಹೊಸ ಚಿತ್ರಕ್ಕೆ ಅವರು ₹30 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

ಪ್ರಭಾಸ್‌ ನಟನೆಯ ‘ಜಾನ್‌’ ಚಿತ್ರದ ಚಿತ್ರೀಕರಣವು ಜನವರಿಯಲ್ಲಿ ಆರಂಭವಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು