ಸೋಮವಾರ, ಮೇ 16, 2022
27 °C

ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಡ್ಯಾನ್ಸರ್ ಪ್ರಭು ದೇವ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ಕೋರಿಯೊಗ್ರಾಫರ್, ನಟ, ನಿರ್ದೇಶಕ ಹೀಗೆ ಬಹುಮುಖ ಪ್ರತಿಭೆಯಾಗಿರುವ ಪ್ರಭು ದೇವ ಅವರು ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಭು ದೇವ ಪೊಲೀಸ್ ಅಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಪೋಣ್ ಮಾಣಿಕ್‌ವೇಲ್’ ಸಿನಿಮಾ ನಾಳೆ (ನವೆಂಬರ್ 19) ಪ್ರಮುಖ ಓಟಿಟಿ ವೇದಿಕೆಯಾದ ‘ಹಾಟ್‌ಸ್ಟಾರ್‌’ನಲ್ಲಿ ಬಿಡುಗಡೆಯಾಗಲಿದೆ.

ಸಸ್ಪೆನ್ಸ್ ಹಾಗೂ ಆಕ್ಷನ್ ಥ್ರಿಲ್ಲರ್ ಕಥೆ ಹೊಂದಿರುವ ‘ಪೋಣ್ ಮಾಣಿಕ್‌ವೇಲ್’ ಸಿನಿಮಾವನ್ನು ‘ಕಂದಾಯಿನ್’ ಖ್ಯಾತಿಯ ಎ.ಸಿ ಮುಗಿಲ್ ಚೆಲ್ಲಪ್ಪನ್ ಅವರು ನಿರ್ದೇಶಿಸಿದ್ದಾರೆ. ನೇಮಿಚಂದ್ ಜಾಬ್ಯಾಕ್ ನಿರ್ಮಿಸಿದ್ದು, ಇದು ತಮಿಳಿನಲ್ಲಿ ಮಾತ್ರ ತೆರೆ ಕಾಣುತ್ತಿದೆ. ನಾಯಕಿಯಾಗಿ ನಿವೇತಾ ಪೇತುರಾಜ್ ಅಭಿನಯಸಿದ್ದಾರೆ.

ಇನ್ನೊಂದು ವಿಶೇಷವೆಂದರೆ ಪ್ರಭು ದೇವ ಅವರ 50 ನೇ ಚಿತ್ರ ಇದಾಗಿದ್ದು, ಸಿನಿಮಾ ಯಶಸ್ವಿಯಾಗಲೆಂದು ಚಿತ್ರರಂಗದ ಗಣ್ಯರು ಶುಭ ಹಾರೈಸಿದ್ದಾರೆ.

 

ಇದನ್ನೂ ಓದಿ: ನಟ ದುನಿಯಾ ವಿಜಯ್ ತಂದೆ ರುದ್ರಪ್ಪ ನಿಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು